ಬೊಳ್ಜೆಯಲ್ಲಿ 65 ಲಕ್ಷ ವೆಚ್ಚದ ಆಯುಷ್ಮಾನ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಗುದ್ದಲಿ ಪೂಜೆ
Monday, October 19, 2026
ಕಾಪು ವಿಧಾನಸಭಾ ಕ್ಷೇತ್ರದ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಳ್ಜೆಯಲ್ಲಿ 65 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಆಯುಷ್ಮಾನ್ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಕಟ್ಟಡಕ್ಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ವಿಜಯ್ ಕುಮಾರ್, ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಜಿತೇಂದ್ರ ಶೆಟ್ಟಿ, ಸಂತೋಷ್ ಸುವರ್ಣ ಬೊಳ್ಜೆ, ರಾಧಾಕೃಷ್ಣ ಶ್ರೀಯಾನ್, ಸರೋಜ ಸುಧಾಕರ್, ಯೋಗೀಶ್ ಕೋಟ್ಯಾನ್, ರವಿ ಸಾಲ್ಯಾನ್, ಗರೋಡಿ ಅಧ್ಯಕ್ಷ ಪ್ರಕಾಶ್ ಡಿ. ಕೋಟ್ಯಾನ್, ಪ್ರಧಾನ ಅರ್ಚಕ ಅಶೋಕ್ ಪೂಜಾರಿ, ಹಿರಿಯ ಮುಖಂಡರಾದ ಸುಂದರ ಎಸ್. ಕೋಟ್ಯಾನ್, ಶಿವರಾಮ್ ಶೆಟ್ಟಿ, ಬ್ರಹ್ಮ ಬೈದರ್ಕಳ ಯಕ್ಷಗಾನ ಕಲಾ ಮಂಡಳಿಯ ಗೌರವಾಧ್ಯಕ್ಷ ವಿಶ್ವನಾಥ್ ಡಿ. ಕೋಟ್ಯಾನ್, ಭಗವತಿ ತೀಯಾ ಸಮಾಜದ ಗೌರವಾಧ್ಯಕ್ಷ ವಿಠಲ ಬಿ. ಕೇದಾರ್, ರವಿ ಕುಮಾರ್ ಉದ್ಯಾವರ, ಪ್ರತಾಪ್, ಜಯಕರ್ ಕೇದಾರ್, ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶೈನಿ ಸೇರಿದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
