ನವರಾತ್ರಿ ಪ್ರಯುಕ್ತ ಬೆಳ್ಕಳೆ ಶ್ರೀ ಬಬ್ಬುಸ್ವಾಮಿ ದೈವ, ಅಮ್ಮೂರು ತಾಯಿಯ ದರ್ಶನ
Monday, October 19, 2026
ಉಡುಪಿ ಬೆಳ್ಕಳೆಯ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ದೇವಸ್ಥಾನ, ಶ್ರೀ ಮೂಕಾಂಬಿಕಾ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಅಂಗವಾಗಿ ಶ್ರೀ ಬಬ್ಬುಸ್ವಾಮಿ ದೈವದ ಸಂದರ್ಶನ ಹಾಗೂ ಅಮ್ಮೂರು ತಾಯಿಯ ದರ್ಶನ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಸಮಿತಿ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಪದಾಧಿಕಾರಿಗಳಾದ ಸತೀಶ್ ಶೆಟ್ಟಿ, ಅಣ್ಣಯ್ಯ ಪಾಲನ್, ನ್ಯಾಯವಾದಿ ಸಂದೀಪ್, ಚೇತನ್ ರಾವ್, ಮಂಜುನಾಥ್, ಅನಿಲ್ ಪಾಲನ್ ಸೇರಿದಂತೆ ಗುರಿಕಾರರು, ಭಕ್ತಾಭಿಮಾನಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.