-->
ಮಣಿಪಾಲದ ಪೊದೆಯೊಂದರಲ್ಲಿ ಮಾನವ ಅಸ್ಥಿಪಂಜರದ ಭಾಗಗಳು ಪತ್ತೆ

ಮಣಿಪಾಲದ ಪೊದೆಯೊಂದರಲ್ಲಿ ಮಾನವ ಅಸ್ಥಿಪಂಜರದ ಭಾಗಗಳು ಪತ್ತೆ

 


ಮಣಿಪಾಲದ ಅನಂತನಗರದ ಮೂರನೇ ಕ್ರಾಸ್‌ನಲ್ಲಿರುವ ಸರ್ಕಾರಿ ಜಾಗದ ಪೊದೆಗಳಲ್ಲಿ ಮಾನವ ಅಸ್ಥಿಪಂಜರದ ಕೆಲವು ಭಾಗಗಳು ಬುಧವಾರ ಪತ್ತೆಯಾಗಿವೆ.


ಖಾಲಿ ಜಾಗವನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದ್ದ ವೇಳೆ ಭಾಗಶಃ ತಲೆಬುರುಡೆ ಹಾಗೂ ಕೈಗಳ ಮೂಳೆಗಳು ಪತ್ತೆಯಾಗಿದ್ದು, ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮೂಳೆಗಳ ಭಾಗಗಳನ್ನು ವಶಕ್ಕೆ ಪಡೆದು, ಹೆಚ್ಚಿನ ಪರಿಶೀಲನೆಗಾಗಿ ಮಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

 ವಿಧಿವಿಜ್ಞಾನ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Ads on article

Advertise in articles 1

advertising articles 2

Advertise under the article