-->
ಉಡುಪಿಯಲ್ಲಿ ನವೀಕೃತ ‘ದ ಒರಿಜಿನಲ್ ಆಭರಣ’ ಮಳಿಗೆ ಪುನರಾರಂಭ

ಉಡುಪಿಯಲ್ಲಿ ನವೀಕೃತ ‘ದ ಒರಿಜಿನಲ್ ಆಭರಣ’ ಮಳಿಗೆ ಪುನರಾರಂಭ


ಉಡುಪಿ ನಗರದ ಸಿ.ಬಿ. ರಸ್ತೆಯಲ್ಲಿ 1935ರಲ್ಲಿ ಆರಂಭಗೊಂಡ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ‘ದ ಒರಿಜಿನಲ್ ಆಭರಣ ಜುವೆಲ್ಲರ್ಸ್’ ನವೀಕೃತ ರೂಪದಲ್ಲಿ ಬುಧವಾರ ಪುನರಾರಂಭಗೊಂಡಿತು. ಅತ್ಯಾಧುನಿಕ ವಿನ್ಯಾಸ ಮತ್ತು ಆಧುನಿಕ ಸೌಲಭ್ಯಗಳೊಂದಿಗೆ ಸಜ್ಜುಗೊಂಡ ಮಳಿಗೆಯನ್ನು ಗಣ್ಯರು ಸಾಂಪ್ರದಾಯಿಕವಾಗಿ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.


ಆಭರಣ ಜುವೆಲ್ಲರ್ಸ್ ಪ್ರೈವೇಟ್ ಲಿಮಿಟೆಡ್‌ನ ಮೊದಲ ಮಳಿಗೆಯಾಗಿರುವ ಇದು, ಒಂಬತ್ತು ದಶಕಗಳಿಗೂ ಮೀರಿದ ಸಂಸ್ಥೆಯ ಪರಂಪರೆ ಹಾಗೂ ಗ್ರಾಹಕರ ವಿಶ್ವಾಸದ ಸಂಕೇತವಾಗಿದೆ. ಸಂಸ್ಥೆಯ ಪ್ರಧಾನ ಕಚೇರಿಯೂ ಆಗಿರುವ ಈ ಮಳಿಗೆಯನ್ನು ಗ್ರಾಹಕರಿಗೆ ಸುಗಮ ಮತ್ತು ವಿಶಿಷ್ಟ ಖರೀದಿ ಅನುಭವ ಒದಗಿಸುವ ಉದ್ದೇಶದಿಂದ ನವೀಕರಿಸಲಾಗಿದೆ.




ಗೀತಾ ಪೈ, ಸುಮನಾ ಪ್ರಭು, ಶಾಲಿನಿ ಜಿ. ಶಂಕರ್, ಸಂಧ್ಯಾ ಪೈ, ರೋಹಿಣಿ ಶೆಣೈ, ನಟ ಅಂಕಿತ್ ಅಮರ್, ಲತಾ ಹೆಗ್ಡೆ, ಗೀತಾ ಹೆಗ್ಡೆ ಹಾಗೂ ಆಭರಣ ಜುವೆಲ್ಲರ್ಸ್ ಅಧ್ಯಕ್ಷ ಮಧುಕರ್ ಎಸ್. ಕಾಮತ್ ದೀಪ ಬೆಳಗಿಸಿ ನವೀಕೃತ ಮಳಿಗೆಯನ್ನು ಉದ್ಘಾಟಿಸಿದರು. ಗಣ್ಯರು, ಹಿತೈಷಿಗಳು ಹಾಗೂ ಗ್ರಾಹಕರು ಸಂಸ್ಥೆಯ ಮುಂದಿನ ಬೆಳವಣಿಗೆಗೆ ಶುಭ ಹಾರೈಸಿದರು.

ನವೀಕೃತ ಶೋರೂಂ ಎರಡು ಮಹಡಿಗಳಲ್ಲಿ ವಿನ್ಯಾಸಗೊಂಡಿದ್ದು, ಗ್ರಾಹಕರ ವಿಭಿನ್ನ ಅಭಿರುಚಿಗಳಿಗೆ ತಕ್ಕಂತೆ ವೈವಿಧ್ಯಮಯ ಆಭರಣ ಸಂಗ್ರಹಗಳನ್ನು ಪರಿಚಯಿಸಲಾಗಿದೆ. ನೆಲ ಮಹಡಿಯಲ್ಲಿ ವೆಡ್ಡಿಂಗ್ ಕಲೆಕ್ಷನ್, ಹೆರಿಟೇಜ್ ಹಾಗೂ ಜೆಮ್‌ಸ್ಟೋನ್ ವಿಭಾಗಗಳಿದ್ದರೆ, ಮೊದಲ ಮಹಡಿಯಲ್ಲಿ ಪ್ರಿಟ್ಟಿ, ನಿಯೋಲೈಟ್ ಮತ್ತು ಸಮಕಾಲೀನ ವಿನ್ಯಾಸಗಳ ಆಭರಣ ಸಂಗ್ರಹಗಳಿವೆ.

ಶೋರೂಂನ ವಿವಿಧ ವಿಭಾಗಗಳನ್ನು ಗಣ್ಯರು ಉದ್ಘಾಟಿಸಿದರು. ಉದ್ಯಮಿ ಪುರುಷೋತ್ತಮ್ ಪಿ. ಶೆಟ್ಟಿ ವೆಡ್ಡಿಂಗ್ ಕಲೆಕ್ಷನ್, ರಂಜನಾ ಶೆಟ್ಟಿ ರೂಬಿ ವಿಭಾಗ, ಡಾ. ಭಾರ್ಗವಿ ಐತಾಳ್ ಸಾಂಪ್ರದಾಯಿಕ ಆಭರಣ ವಿಭಾಗ ಹಾಗೂ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ ಹೆರಿಟೇಜ್ ವಿಭಾಗವನ್ನು ಅನಾವರಣಗೊಳಿಸಿದರು.

ವಿಮಲಾ ನಾಯಕ್ ಸಮಕಾಲೀನ ಆಭರಣ ವಿಭಾಗ ಹಾಗೂ ಸತೀಶ್ ಪೈ ನಿಯೋಲೈಟ್ ವಿಭಾಗವನ್ನು ಉದ್ಘಾಟಿಸಿದರು. ನಿಯೋಲೈಟ್ ಆಭರಣಗಳನ್ನು ಶೋಭಾ ಸುಖಾನಂದ ಶೆಣೈ ಅನಾವರಣಗೊಳಿಸಿದರು. ಉದ್ಯಮಿ ಕೋಮಲ್ ಪ್ರಭು, ದೀಪಾ ಪೈ ಮತ್ತು ಮೀನಾ ಲಕ್ಷ್ಮೀಣಿ ಮಹಾರಾಷ್ಟ್ರ ಶೈಲಿಯ ಆಭರಣ ವಿಭಾಗವನ್ನು, ವಿಜಯಲಕ್ಷ್ಮೀ ಸೂಡಾ ಪ್ರಿಟ್ಟಿ ಕಲೆಕ್ಷನ್ ಅನ್ನು ಉದ್ಘಾಟಿಸಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಭಾಸ್ ಎಂ. ಕಾಮತ್ ಮಾತನಾಡಿ, “ಸಿ.ಬಿ. ರಸ್ತೆಯ ಮೂಲ ಮಳಿಗೆ ನವೀಕೃತ ರೂಪದಲ್ಲಿ ಪುನರಾರಂಭಗೊಂಡಿರುವುದು ಹೆಮ್ಮೆಯ ಕ್ಷಣ. ತಲೆಮಾರುಗಳಿಂದ ಈ ಮಳಿಗೆ ಉಡುಪಿಯ ವಾಣಿಜ್ಯ ಮತ್ತು ಸಾಂಸ್ಕೃತಿಕ ಬದುಕಿನೊಂದಿಗೆ ಬೆಸೆದುಕೊಂಡಿದೆ. ಗ್ರಾಹಕರು ಹಾಗೂ ಹಿತೈಷಿಗಳು ತೋರಿದ ನಿರಂತರ ಪ್ರೋತ್ಸಾಹವೇ ಈ ಸಾಧನೆಗೆ ಕಾರಣ” ಎಂದರು.

ನಿರ್ದೇಶಕ ಮಹೇಶ್ ಎಂ. ಕಾಮತ್ ಮಾತನಾಡಿ, “ವಿವಿಧ ಆಭರಣ ಸಂಗ್ರಹಗಳ ವೈಶಿಷ್ಟ್ಯವನ್ನು ಹೆಚ್ಚಿಸುವುದರೊಂದಿಗೆ ಗ್ರಾಹಕರು ಸುಲಭವಾಗಿ ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಮಳಿಗೆಯನ್ನು ವಿನ್ಯಾಸಗೊಳಿಸಲಾಗಿದೆ. ಮದುವೆಯ ಆಭರಣಗಳಿಂದ ಹಿಡಿದು ಹೆರಿಟೇಜ್, ಜೆಮ್‌ಸ್ಟೋನ್ ಮತ್ತು ಸಮಕಾಲೀನ ವಿನ್ಯಾಸಗಳವರೆಗೆ ಹಲವು ಬಗೆಯ ಸಂಗ್ರಹಗಳನ್ನು ಒಂದೇ ಸೂರಿನಡಿ ಪರಿಚಯಿಸಲಾಗಿದೆ” ಎಂದು ತಿಳಿಸಿದರು.

1935ರಲ್ಲಿ ಉಡುಪಿಯ ಸಿ.ಬಿ. ರಸ್ತೆಯಲ್ಲಿ ಒಂದೇ ಮಳಿಗೆಯೊಂದಿಗೆ ಆರಂಭಗೊಂಡ ‘ದ ಒರಿಜಿನಲ್ ಆಭರಣ’ ಸಂಸ್ಥೆ, ಅಧ್ಯಕ್ಷ ಮಧುಕರ್ ಎಸ್. ಕಾಮತ್ ಅವರ ದೂರದೃಷ್ಟಿ ಮತ್ತು ಗ್ರಾಹಕರ ವಿಶ್ವಾಸದ ಬಲದಿಂದ ವಿಸ್ತಾರಗೊಂಡಿದೆ. ಪ್ರಸ್ತುತ ಕರ್ನಾಟಕ ಮತ್ತು ಗೋವಾದ ಎಂಟು ಜಿಲ್ಲೆಗಳ 17 ಸ್ಥಳಗಳಲ್ಲಿ ಒಟ್ಟು 20 ಮಳಿಗೆಗಳನ್ನು ಹೊಂದಿದೆ. ಬೆಂಗಳೂರಿನ ಜಯನಗರ ಐದನೇ ಬ್ಲಾಕ್‌ನಲ್ಲಿಯೂ ಸಂಸ್ಥೆಯ ಮಳಿಗೆ ಕಾರ್ಯನಿರ್ವಹಿಸುತ್ತಿದೆ.

ನ್ಯಾಯಯುತ ಬೆಲೆ, ನೈತಿಕ ವ್ಯವಹಾರ, ಅತ್ಯುತ್ತಮ ಕರಕುಶಲತೆ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡುತ್ತಾ ಬಂದಿರುವ ಸಂಸ್ಥೆ, ಒಂಬತ್ತು ದಶಕಗಳ ಪರಂಪರೆಯನ್ನು ಮುಂದುವರಿಸಿಕೊಂಡು ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಂಡಿದೆ.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಸಂಧ್ಯಾ ಎಸ್. ಕಾಮತ್, ವೀಣಾ ಎಂ. ಕಾಮತ್, ಡಾ. ಅರುಣ್ ಕುಡ್ವ, ಕ್ಷಮಾ ಕುಡ್ವ, ಸಾತ್ವಿಕ್ ಎಸ್. ಕಾಮತ್, ಆಕರ್ಷ್ ಎಂ. ಕಾಮತ್, ಶ್ಲೋಕಾ ಕಾಮತ್, ಅದಿತ್ರಿ ಕಾಮತ್ ಸೇರಿದಂತೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು

Ads on article

Advertise in articles 1

advertising articles 2

Advertise under the article