-->
ಗೋಕರ್ಣ ಬೀಚ್‌ನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

ಗೋಕರ್ಣ ಬೀಚ್‌ನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ


ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ದುಬ್ಬನಶಶಿ ಬೀಚ್‌ನಲ್ಲಿ ಸಮುದ್ರದ ಭಾರಿ ಅಲೆಗಳಿಗೆ ಸಿಲುಕಿ ಮುಳುಗಿ ನಾಪತ್ತೆಯಾಗಿದ್ದ ಬೆಂಗಳೂರಿನ 24 ವರ್ಷದ ಯುವಕ ವಿಶ್ವೇಶ್ ಎ.ಕೆ. ಅವರ ಮೃತದೇಹ ಸೋಮವಾರ ಬೆಳಗಿನ ಜಾವ ಪತ್ತೆಯಾಗಿದೆ.

ನ.1ರಂದು ಬೆಳಿಗ್ಗೆ ಸುಮಾರು 7.30ರ ವೇಳೆಗೆ ದುಬ್ಬನಶಶಿ ಬೀಚ್‌ನಲ್ಲಿ ಸಮುದ್ರದಲ್ಲಿ ಆಟವಾಡುತ್ತಿದ್ದ ವೇಳೆ ವಿಶ್ವೇಶ್ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಈ ಸಂದರ್ಭದಲ್ಲಿ ಭಾರಿ ಅಲೆಗಳಿಗೆ ಸಿಲುಕಿದ್ದ ಪ್ರವಾಸಿಗರ ಪೈಕಿ ಇಬ್ಬರು ಮೃತಪಟ್ಟಿದ್ದು, ಕೆಲವರನ್ನು ರಕ್ಷಿಸಲಾಗಿತ್ತು. ಘಟನೆಯಲ್ಲಿ ವಿಶ್ವೇಶ್ ನಾಪತ್ತೆಯಾಗಿದ್ದರು.

ವಿಶ್ವೇಶ್‌ಗಾಗಿ ಗೋಕರ್ಣ ಪೊಲೀಸರು, ಕರಾವಳಿ ಕಾವಲುಪಡೆ ಸಿಬ್ಬಂದಿ ಹಾಗೂ ಸ್ಥಳೀಯರು ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಸತತ ಶೋಧ ಕಾರ್ಯಾಚರಣೆಯ ಬಳಿಕ ಸೋಮವಾರ ಬೆಳಗಿನ ಜಾವ ಸುಮಾರು 1.45ಕ್ಕೆ ದುಬ್ಬನಶಶಿ ಬೀಚ್ ಸಮೀಪ ಅವರ ಮೃತದೇಹ ಪತ್ತೆಯಾಗಿದೆ.


Ads on article

Advertise in articles 1

advertising articles 2

Advertise under the article