
Brahmavara: ಲಯನ್ಸ್ ಕ್ಲಬ್ ವತಿಯಿಂದ ವೈದ್ಯರಿಗೆ ಸನ್ಮಾನ
29/07/2025
ಲಯನ್ಸ್ ಕ್ಲಬ್ ಬ್ರಹ್ಮಾವರ-ವತಿಯಿಂದ ಸ್ಥಳೀಯ ವೈದ್ಯರಾದ ಡಾ. ಚಂದ್ರಶೇಖರ ಶೆಟ್ಟಿ ಇವರನ್ನು ವೈದ್ಯರ ದಿನಾಚರಣೆ ಪ್ರಯುಕ್ತ ಸನ್ಮಾನಿಸಲಾಯಿತು.
ಲಯನ್ಸ್ ಅಧ್ಯಕ್ಷ ಸುಧೇಶ್ ಹೆಗ್ಡೆ ಮಾತನಾಡಿ ಡಾ. ಚಂದ್ರಶೇಖರ ಶೆಟ್ಟಿ ಅವರು ಸುಮಾರು 37 ವರ್ಷಗಳಿಂದ ವೈದ್ಯಕೀಯ ಸೇವೆಯನ್ನು ಚಾಂತರ್ ರಸ್ತೆ ಜಂಕ್ಷನನಲ್ಲಿನ ಗಣೇಶ ಕ್ಲಿನಿಕ್ ನಲ್ಲಿ ಸಲ್ಲಿಸಿ ಜನಮನ್ನಣೆ ಪಡೆದಿರುತ್ತಾರೆ. ಜನಸಾಮಾನ್ಯರಿಗೆ ಸಹಾಯಹಸ್ತ, ಸಹಕಾರ ನೀಡುವುದರೊಂದಿಗೆ ಸಂಘ ಸಂಸ್ಥೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ ಎಂದರು. ಕಾರ್ಯದರ್ಶಿ ಪ್ರದೀಪ್ ಶೆಟ್ಟಿ, ಖಜಾಂಚಿ ಪ್ರಭಾಕರ್ ಶೆಟ್ಟಿ, ಮಾಜಿ ಅಧ್ಯಕ್ಷ ಜಯರಾಮ್ ನಾಯಕ್, ಉಪಾಧ್ಯಕ್ಷ ಗ್ರೆಗರಿ ಡಿಸಿಲ್ವಾ, ಚಂದ್ರಶೇಖರ್ ಶೆಟ್ಟಿ ಬಿ, ಪ್ರತಾಪಚಂದ್ರ ಶೆಟ್ಟಿ, ವೆಂಕಟರಮಣ ಶೆಟ್ಟಿ, ರಾಮಪ್ಪ ಕುಂದರ್ ಉಪಸ್ಥಿತರಿದ್ದರು.