
Breaking ವರ್ಣಬೇಧ ನೀತಿ ವಿರುದ್ಧ ಹೋರಾಡಿದ್ದ ಮಾಡೆಲ್ ಆತ್ಮಹತ್ಯೆ
14/07/2025 01:41 PM
ಮಾಡೆಲಿಂಗ್ ಕ್ಷೇತ್ರದಲ್ಲಿ ವರ್ಣಬೇಧ ನೀತಿ ವಿರುದ್ಧ ಹೋರಾಟ ನಡೆಸಿ, ಎಲ್ಲ ರೀತಿಯ ಜನರಿಗೂ ಮಾಡೆಲಿಂಗ್ನಲ್ಲಿ ಅವಕಾಶ ಸಿಗುವಂತೆ ಆಗಬೇಕು ಎಂದು ಹೋರಾಡಿದ್ದ ಸನ್ ರೆಚಲ್ ಗಾಂಧಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಮಿಸ್ ಡಾರ್ಕ್ ಕ್ವೀನ್ ತಮಿಳುನಾಡು 2019 ಪ್ರಶಸ್ತಿ ವಿಜೇತೆ ಸನ್ ರೆಚಲ್ ಗಾಂಧಿ (26) ಪುದುಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಚೆಲ್ ಅವರು ಖಿನ್ನತೆಯಿಂದ ಬಳಲುತ್ತಿದ್ದರು. ಜುಲೈ 5 ರಂದು ಅತಿಯಾದ ನಿದ್ರೆ ಮಾತ್ರೆಗಳನ್ನು ಸೇವಿಸಿದ್ದರು. ಇವರ ಪರಿಸ್ಥಿತಿ ತಿಳಿದ ಕೂಡಲೇ ಚಿಕಿತ್ಸೆಗಾಗಿ ಇಂದಿರಾ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆ ಮತ್ತು ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂಧಿಸದೇ ಮೃತಪಟ್ಟಿದ್ದಾರೆ.
ರೆಚಲ್ ಗಾಂಧಿ ಫ್ಯಾಷನ್ ಜಗತ್ತಿನಲ್ಲಿ ಹೊಸತನಗಳನ್ನು ಜಾರಿ ತಂದರು. ಎಲ್ಲ ರೀತಿಯ ಬಣ್ಣದ ಜನರನ್ನು ಪ್ರೋತ್ಸಾಹಿಸಿದರು. ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ರೆಚಲ್ ಅವರ ತಂದೆ ಡಿ. ಗಾಂಧಿ (57 ) ನೆರಳಲ್ಲಿ ಬೆಳೆದರು. ಅವರಿಗೆ ತಂದೆಯೇ ಎಲ್ಲ ಆಗಿದ್ದರು. ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡುವ ಕನಸಿಗೆ ತಂದೆ ಬೆಂಬಲ ನೀಡಿದರು. ಎಲ್ಲದಕ್ಕೂ ಅವರೇ ಸ್ಪೂರ್ತಿ. ಆರಂಭದಲ್ಲಿ, ಅವರು ತಮ್ಮ ಕಪ್ಪು ಮೈಬಣ್ಣದಿಂದಾಗಿ ಅನೇಕ ಸವಾಲುಗಳನ್ನು ಎದುರಿಸಿದರು. ಮಾಡೆಲಿಂಗ್ ಸಾಮ್ರಾಜ್ಯದಲ್ಲಿ ಚರ್ಮದ ಬಣ್ಣದ ತಾರತಮ್ಯವನ್ನು ವಿರೋಧಿಸಿ ರೆಚಲ್ ಧ್ವನಿ ಎತ್ತಿದರು. ಮಹಿಳೆಯರ ಸುರಕ್ಷತೆ ಬಗ್ಗೆಯೂ ಮಾತನಾಡಿದ್ದರು.
ಅವರಿಗೆ ಸಂದ ಪ್ರಶಸ್ತಿಗಳ ಪಟ್ಟಿ
2019 ರಲ್ಲಿ ಮಿಸ್ ಡಾರ್ಕ್ ಕ್ವೀನ್ ತಮಿಳುನಾಡು ಪ್ರಶಸ್ತಿ ಗೆದ್ದರು. ಮಿಸ್ ಪುದುಚೇರಿ ಪ್ರಶಸ್ತಿ 2021 ರಲ್ಲಿ ಮುಡಿಗೇರಿಸಿಕೊಂಡರು. ಲಂಡನ್, ಜರ್ಮನಿ ಮತ್ತು ಫ್ರಾನ್ಸ್ನಲ್ಲಿ ನಡೆದ ಅಂತರರಾಷ್ಟ್ರೀಯ ಮಾಡೆಲಿಂಗ್ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು. ಮಹಿಳೆಯರ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಕೆಲಸ ಮಾಡಿದರು.ಇತ್ತೀಚೆಗಷ್ಟೇ ಮದುವೆಯಾಗಿದ್ದ ರೆಚಲ್ ಪಟ್ಟಣದ ವ್ಯಾಪ್ತಿಯಲ್ಲಿರುವ 100 ಅಡಿ ರಸ್ತೆಯ ಬಳಿಯ ಝಾನ್ಸಿ ನಗರದಲ್ಲಿ ತಮ್ಮ ಪತಿಯೊಂದಿಗೆ ನೆಲೆಸಿದರು. ಇತ್ತೀಚೆಗೆ, ಅವರು ಖಿನ್ನತೆಯಿಂದ ಬಳಲುತ್ತಿದ್ದರು. ಉರಲೈಯನ್ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.