
Udupi: ಹಸುವಿನ ತಲೆ ಹಾಗೂ ದೇಹದ ಭಾಗಗಳು ಪತ್ತೆ
14/07/2025 10:58 AM
ಕಾರ್ಕಳ ತಾಲೂಕಿನ ಮಲೆಬೆಟ್ಟು ಬಳಿ ಹಸುವಿನ ತಲೆ ಮತ್ತು ಇತರ ದೇಹದ ಭಾಗಗಳು ಪತ್ತೆಯಾಗಿವೆ. ಸ್ವರ್ಣಾ ನದಿಯಲ್ಲಿ ಹಸುವಿನ ಅಂಗಾ0ಗಗಳು ತೇಲಿ ಬಂದಿರಬಹುದು ಎಂದು ಅನುಮಾನಿಸಲಾಗಿದೆ. ಸಂಘಟನೆ ಕಾರ್ಯಕರ್ತರು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಾಳ, ಕಡಾರಿ, ಎಸ್.ಕೆ.ಬಾರ್ಡರ್ ಬಳಿ ಅಕ್ರಮ ಕಸಾಯಿಖಾನೆ ಇರುವ ಶಂಕೆ ವ್ಯಕ್ತವಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.