
Kota: ಅಕ್ರಮ ಗೋ ಸಾಗಾಟ; ಇಬ್ಬರು ಆರೋಪಿಗಳ ಬಂಧನ, ವಾಹನ ಜಪ್ತಿ
23/07/2025 05:13 AM
ಕಳೆದ ಕೆಲ ದಿನಗಳ ಹಿಂದೆ ಕುಂದಾಪುದ ಬಿದ್ಕಲ್ ಕಟ್ಟೆ ಪೇಟೆಯ ಬಳಿ ನಡೆದ ಗೋಕಳ್ಳತನ ಪ್ರಕರಣಕ್ಕೆ ಸಂಬ0ಧಿಸಿದ0ತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು ಅಮೆಮ್ಮಾರ್ ಮಸೀದಿ ಬಳಿಯ ನಿವಾಸಿ ಇಮ್ರಾನ್ ಯಾನೆ ಕುಟ್ಟು (31) ಮತ್ತು ಮಂಗಳೂರು ತಾಲೂಕಿನ ಗಂಜಿಮಠ, ಮುಂದುಪುರ ಗ್ರಾಮದ ಮುಂಡೇವು ನಿವಾಸಿ ಇರ್ಷಾದ್ (30) ಎಂದು ಗುರುತಿಸಲಾಗಿದೆ.
ಕುಂದಾಪುರದ ಹುಣಸೇಮಕ್ಕಿ ಕಡೆಯಿಂದ ಬಂದ ವಾಹನದಲ್ಲಿ ಮೂವರು ಗೋಕಳ್ಳರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬೀಡಾಡಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ್ದರು. ಕೆಲ ದಿನಗಳ ಹಿಂದೆ ಬಿದ್ಕಲ್ ಕಟ್ಟೆ ಪೇಟೆ ಬಳಿ ಮಲಗಿದ್ದ ಜಾನುವಾರುಗಳನ್ನು ವಾಹನದಲ್ಲಿ ಹಿಂಸಾತ್ಮಕವಾಗಿ ಎಳೆದೊಯ್ದು ಸಾಗಾಟ ಮಾಡಲಾಗಿತ್ತು. ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕಾರ್ಯಾಚರಣೆಗಿಳಿದ ಕೋಟ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ ಇಮ್ರಾನ್ ಹಾಗೂ ಇರ್ಷಾದ್ ಎಂಬಿಬ್ಬರನ್ನು ಬಂಧಿಸಿ, ಗೋ ಕಳ್ಳತನಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರ ಪೈಕಿ ಇಮ್ರಾನ್ ವಿರುದ್ಧ ಒಟ್ಟು 35 ಗೋ ಕಳ್ಳತನ ಪ್ರಕರಣಗಳಿವೆ. ಇನ್ನೋರ್ವ ಆರೋಪಿ ಇರ್ಶಾದ್ ವಿರುದ್ಧ ಒಟ್ಟು 14 ಪ್ರಕರಣಗಳು ಈವರೆಗೆ ದಾಖಲಾಗಿವೆ.