Mangalore: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ; ಕೇರಳ ಯೂಟ್ಯೂಬರ್ ಬಂಧನ

Mangalore: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ; ಕೇರಳ ಯೂಟ್ಯೂಬರ್ ಬಂಧನ


ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಕೇರಳದ ಯೂಟ್ಯೂಬರ್ ಒಬ್ಬನನ್ನು ಮಂಗಳೂರಿನ ಏರ್‌ಪೋರ್ಟ್ನಲ್ಲಿ ಬಂಧಿಸಲಾಗಿದೆ. ಬಂಧಿತನನ್ನು ಕಾಸರಗೋಡು ನಿವಾಸಿ ಮುಹಮ್ಮದ್ ಸಾಲಿ ಎಂದು ಗುರುತಿಸಲಾಗಿದೆ. 


ಆರೋಪಿ ವಿದೇಶದಿಂದ ಹಿಂದಿರುಗಿದಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೊಯಿಲಾಂಡಿ ಪೊಲೀಸರು ಬಂಧಿಸಿದ್ದಾರೆ. ಈತ ಕಳೆದ ಏಳು ವರ್ಷಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯನಾಗಿದ್ದು, ಸಾಲಿ, ಶಾಲು ಕಿಂಗ್ ಮೀಡಿಯಾ, ಶಾಲು ಕಿಂಗ್ ವ್ಲಾಗ್ಸ್ ಮತ್ತು ಶಾಲು ಕಿಂಗ್ ಫ್ಯಾಮಿಲಿ ಸೇರಿದಂತೆ ವಿವಿಧ ಹೆಸರುಗಳಲ್ಲಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹೊಂದಿದ್ದಾನೆ. ಈತನಿಗೆ 2016 ರಲ್ಲಿ ವಿವಾಹವಾಗಿದ್ದು, ಮೂವರು ಮಕ್ಕಳಿದ್ದಾರೆ. ಪತ್ನಿಯಿಂದ ದೂರವಾಗಿದ್ದ ಸಮಯದಲ್ಲಿ ಇನ್‌ಸ್ಟಾಗ್ರಾಮ್ ಮತ್ತು ಸ್ನ್ಯಾಪ್‌ಚಾಟ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಆಕೆಗೆ ತಾನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. 

ಈತನ ಮೇಲೆ ಪ್ರಕರಣ ದಾಖಲಾದ ನಂತರ, ಆರೋಪಿ ದೇಶ ಬಿಟ್ಟು ಪರಾರಿಯಾಗಿದ್ದ. ಕೊಯಿಲಾಂಡಿ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದು, ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಆತನನ್ನು ಬಂದಿಸಿದ್ದಾರೆ.



Ads on article

Advertise in articles 1

advertising articles 2

Advertise under the article