Uttarakhand: ಧರಾಲಿಯಲ್ಲಿ ಭೀಕರ ಮೇಘಸ್ಫೋಟ; ಗ್ರಾಮವೇ ನಾಶ (video)

Uttarakhand: ಧರಾಲಿಯಲ್ಲಿ ಭೀಕರ ಮೇಘಸ್ಫೋಟ; ಗ್ರಾಮವೇ ನಾಶ (video)


ಉತ್ತರಾಖಂಡದ ಧರಾಲಿ ಗ್ರಾಮದಲ್ಲಿ ಭೀಕರ ಮೇಘಸ್ಫೋಟಗೊಂಡ ಇಡೀ ಗ್ರಾಮವೇ ನಾಶವಾಗಿದೆ. ಭೀಕರ ಪ್ರವಾಹಕ್ಕೆ ಸುಂದರ ರಮಣೀಯವಾಗಿದ್ದ ಗ್ರಾಮವೇ ಮಣ್ಣಿನಡಿಗೆ ಸಿಲುಕಿದೆ. ಮಧ್ಯಾಹ್ನ 1:45ರ ಸುಮಾರಿಗೆ ಈ ಘಟನೆ ನಡೆದಿದೆ.
 

ಖೀರ್ ಗಂಗಾ ನದಿ ಪ್ರದೇಶದಿಂದ ಮೇಘ ಸ್ಫೋಟಗೊಂಡು ಉತ್ತರಕಾಶಿ ಜಿಲ್ಲೆಯ ಗ್ರಾಮಕ್ಕೆ ಏಕಾಏಕಿ ಭಾರೀ ಪ್ರಮಾಣದ ಪ್ರವಾಹ ನುಗ್ಗಿದೆ. ಪ್ರವಾಹದ ತೀವ್ರತೆಗೆ ಅನೇಕ ಹೊಟೇಲ್‌ಗಳು, ರಸ್ಟೋರೆಂಟ್ ಗಳು, ಹೋಮ್ ಸ್ಟೇ. ಮನೆಗಳು, ಕಟ್ಟಡಗಳು, ಮರಗಳು ಕೊಚ್ಚಿ ಹೋಗಿವೆ.

ಬೆಟ್ಟದ ಎರಡು ವಿಭಿನ್ನ ಬದಿಗಳಲ್ಲಿ ಹರಿದ ಪ್ರವಾಹ ಧರಾಲಿ ಕಡೆಗೆ ಒಂದು ಮತ್ತೊಂದು ಸುಕ್ಕಿ ಗ್ರಾಮದ ಕಡೆಗೆ ನುಗ್ಗಿತ್ತು ಎಂದು  ರಾಜ್ಯ ವಿಪತ್ತು ನಿರ್ವಹಣಾ ಕಾರ್ಯದರ್ಶಿ ವಿನೋದ್ ಕುಮಾರ್ ಅವರು ತಿಳಿಸಿದ್ದಾರೆ. ಸದ್ಯ ಭಾರತೀಯ ಸೇನೆ ಹಾಗೂ ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳು ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ  ಆರಂಭಿಸಿದ್ದಾರೆ.






Ads on article

Advertise in articles 1

advertising articles 2

Advertise under the article