
Udupi: ಹೆದ್ದಾರಿಯ ಹೊಂಡ ಮುಚ್ಚಿದ ಟ್ರಾಫಿಕ್ ಪೊಲೀಸರು; ಭಗವತಿ ನಾಸಿಕ್ ಕಲಾ ತಂಡದಿಂದ ಸನ್ಮಾನ
04/08/2025
ಉಡುಪಿಯ ಹೆದ್ದಾರಿಯಲ್ಲಿ ಹೊಂಡ ಗುಂಡಿಯನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಉಡುಪಿ ಸಂಚಾರ ಠಾಣಾ ಪೊಲೀಸರನ್ನು ಉಡುಪಿಯ ಭಗವತಿ ನಾಸಿಕ್ ಕಲಾ ತಂಡದ ವತಿಯಿಂದ ಸನ್ಮಾನಿಸಲಾಯಿತು.
ಉಡುಪಿಯ ಅಂಬಲಪಾಡಿ ಜಂಕ್ಷನ್‌ನಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಹೊಂಡ ನಿರ್ಮಾಣಗೊಂಡಿತ್ತು. ಹೀಗಾಗಿ ಪ್ರತೀ ನಿತ್ಯ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ಪ್ರಯಾಸ ಪಡುವಂತಾಗಿತ್ತು. ಅಲ್ಲದೇ ವಾಹನ ದಟ್ಟಣೆ ಉಂಟಾಗುತ್ತಿತ್ತು. ಹೀಗಾಗಿ ಉಡುಪಿ ಸಂಚಾರಿ ಠಾಣಾ ಪಿಎಸ್ಐ ಪ್ರಕಾಶ್ ಅವರ ನೇತೃತ್ವದಲ್ಲಿ ಸ್ವತಃ ಸಂಚಾರಿ ಪೊಲೀಸರೇ ಮುಂದೆ ನಿಂತು ಹೊಂಡ ಮುಚ್ಚುವ ಕೆಲಸ ಮಾಡಿದ್ದರು. ಪೊಲೀಸರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆ ವ್ಯಕ್ತವಾಗಿತ್ತು. ಉಡುಪಿ ನಾಸಿಕ್ ಕಲಾ ತಂಡದ ಸದಸ್ಯರು ಸಂಚಾರಿ ಪೊಲೀಸರನ್ನು ಸನ್ಮಾನಿಸಿದರು. ಸಂಚಾರಿ ಠಾಣಾ ಪಿಎಸ್ಐ ಪ್ರಕಾಶ್, ಸಿಬ್ಬಂದಿಗಳಾದ ಸಂತೋಷ್ ಕುಮಾರ್, ನಾಗರಾಜ್ ಹಾಗೂ ಗೃಹ ರಕ್ಷಕ ಸಿಬ್ಬಂದಿ ವಿಜಯ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಸಂಘದ ಅಧ್ಯಕ್ಷ ಪ್ರಣಾಮ್ ಕುಮಾರ್, ಕಾರ್ಯದರ್ಶಿ ಸುಧೀರ್, ಸದಸ್ಯರಾದ ಪ್ರತೀಕ್, ಮನೋಜ್ , ರಾಕೇಶ್, ಸಂತೋಷ್ ದೇವಾಡಿಗ ಮೊದಲಾದವರು ಇದ್ದರು.