
Karkala: ಕೆಸರ್‌ದ ಗೊಬ್ಬು ಕಾರ್ಯಕ್ರಮ; ಕೆಸರು ಗದ್ದೆಯಲ್ಲಿ ಮಿಂದೆದ್ದ ಯುವಕರು, ಮಕ್ಕಳು
04/08/2025
ಬಜಗೋಳಿ ಬಂಟರ ಸೇವಾ ಸಂಘ, ಮಿಯಾರು ಬಂಟರ ಸಂಘ ಇದರ ಸಹಯೋಗದಲ್ಲಿ ಮಿಯ್ಯಾರು ಮಂಜೆ ಮನೆ ಆನಂದ ಎಂ. ಶೆಟ್ಟಿ ಇವರ ನೇತೃತ್ವದಲ್ಲಿ ಕೆಸರ್‌ದ ಗೊಬ್ಬು ಕಾರ್ಯಕ್ರಮವು ಮಿಯ್ಯಾರು ಮಂಜೆ ಮನೆ ಆನಂದ ಎಂ. ಶೆಟ್ಟಿ ಇವರ ಗದ್ದೆಯಲ್ಲಿ ನಡೆಯಿತು.ತೆಂಗಿನ ಹೂವು ಅರಳಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಕೇಮಾರು ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಒಂದು ದಿನವಾದರೂ ಮೊಬೈಲ್ ಬಿಟ್ಟು ಇಂತಹ ಕೃಷಿ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕೇಮಾರು ಈಶ ವಿಠಲದಾಸ ಸ್ವಾಮೀಜಿ, ಐಕಳ ಹರೀಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಉಳ್ತೂರು ಮೋಹನ್ ದಾಸ್ ಶೆಟ್ಟಿ, ಗಣಪತಿ ಹೆಗ್ಡೆ, ಆನಂದ್ ಎಂ ಶೆಟ್ಟಿ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.ಪ್ರಶಾಂತ್ ಪರಪ್ಪಾಡಿ ಹಾಗೂ ಶಿಕ್ಷಕಿ ವಂದನಾ ರೈ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು. ಕ್ರೀಡಾಕೂಟದಲ್ಲಿ ಮಿಯ್ಯಾರು ಪರಿಸರದ ಎಲ್ಲಾ ಸಮುದಾಯದ ಯುವಕ, ಯುವತಿಯರು, ಮಕ್ಕಳು ಭಾಗವಹಿಸಿದ್ದರು.