
Dharmasthala: ಸರಣಿ ಶವ ಹೂತಿರುವ ಪ್ರಕರಣ; ಅರಣ್ಯದಲ್ಲಿ ಕಳೇಬರ ಪತ್ತೆ
04/08/2025
ಧರ್ಮಸ್ಥಳದ ಬಂಗ್ಲಗುಡ್ಡೆಯ ದಟ್ಟ ಅರಣ್ಯದಲ್ಲಿ ಅಸ್ಥಿಪಂಜರದ ಕುರುಹುಗಳು ಪತ್ತೆಯಾಗಿದೆ. ಧರ್ಮಸ್ಥಳದಲ್ಲಿ ಸರಣಿ ಶವಗಳನ್ನು ಹೂತಿರುವ ಪ್ರಕರಣಕ್ಕೆ ಸಂಬ0ಧಿಸಿ ದೂರುದಾರ ಗುರುತಿಸಿದ ಸ್ಥಳಗಳಲ್ಲಿ ಎಸ್‌ಐಟಿ ತಂಡದಿಂದ ಶೋಧ ಕಾರ್ಯ ಮುಂದುವರಿದಿದೆ .
ಆಗಸ್ಟ್ 4ರಂದು ದೂರುದಾರ ಗುರುತಿಸಿದ 11ನೇ ಪಾಯಿಂಟ್‌ನಲ್ಲಿ ಉತ್ಖನನ ನಡೆಸಲು ತೆರಳಲಾಗಿತ್ತು. 11ನೇ ಪಾಯಿಂಟ್‌ಗಿಂತ ಸ್ವಲ್ಪ ದೂರದಲ್ಲಿ ದೂರುದಾರನೇ ಒಂದು ಜಾಗವನ್ನು ಗುರುತಿಸಿದ್ದು, ಅಲ್ಲಿ ಅಸ್ಥಿಪಂಜರದ ಭಾಗಗಳು ಪತ್ತೆಯಾಗಿದೆ. ಅಸ್ಥಿಪಂಜರದ ಕುರುಹುಗಳನ್ನು ಪೊಲೀಸ್ ಬಿಗಿ ಭದ್ರತೆಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಇನ್ನು ಕಾರ್ಯಾಚರಣೆ ವೇಳೆ ಶಸ್ತ್ರಸಜ್ಜಿತ ಸಿಬ್ಬಂದಿಗಳಿ0ದ ಭದ್ರತೆ ಒದಗಿಸಲಾಗುತ್ತಿದ್ದು, ಕಾರ್ಯಾಚರಣೆಯ ಪ್ರತಿಯೊಂದು ದೃಶ್ಯಗಳನ್ನೂ ಚಿತ್ರೀಕರಿಸಲಾಗುತ್ತಿದೆ.