
New Delhi: ಕೆಂಪು ಕೋಟೆಗೆ ನುಗ್ಗಲು ಯತ್ನ: 5 ಮಂದಿ ಬಾಂಗ್ಲಾ ದೇಶೀಯರ ಸೆರೆ
05/08/2025
ಕೆಂಪು ಕೋಟೆಗೆ ನುಗ್ಗಲು ಯತ್ನಿಸಿದ 5 ಮಂದಿ ಬಾಂಗ್ಲಾ ದೇಶೀ ಯುವಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರು 20ರಿಂದ 25 ವರ್ಷ ಪ್ರಾಯದವರಾಗಿದ್ದು, ಮಂಗಳವಾರದಂದು ಅಕ್ರಮವಾಗಿ ಕೆಂಪು ಕೋಟೆ ಪ್ರವೇಶಿಸುವ ವೇಳೆ ಪೊಲೀಸರಿಂದ ಬಂಧಿತರಾಗಿದ್ದಾರೆ. ಅವರು ದೆಹಲಿಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು ಎಂದು ತಿಳಿದು ಬಂದಿದ್ದು, ಅವರ ಬಳಿ ಇದ್ದ ಬಾಂಗ್ಲಾ ದೇಶದ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆ. 15ರಂದು ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವಿರುವುದರಿಂದ ಈ ಪ್ರಕರಣ ಪ್ರಾಮುಖ್ಯತೆ ಪಡೆದಿದೆ.