
Bangalore: ಆ. 5 ರಿಂದ ರಾಜ್ಯದಲ್ಲಿ ಮತ್ತೆ ಮಳೆ ಬಿರುಸು; ಹವಾಮಾನ ಇಲಾಖೆ ಮುನ್ಸೂಚನೆ
04/08/2025
ಕರ್ನಾಟಕದಲ್ಲಿ ಕೊಂಚ ಬಿಡುವು ಪಡೆದಿದ್ದ ಮಳೆ ಮತ್ತೆ ಬಿರುಸು ಪಡೆದುಕೊಳ್ಳುವ ಮುನ್ಸೂಚನೆ ಇದೆ. ಆಗಸ್ಟ್ 5 ರಿಂದ ರಾಜ್ಯವ್ಯಾಪಿ ಮುಂಗಾರು ಸಕ್ರಿಯವಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಬರೀ ಕರಾವಳಿ ಹಾಗೂ ಮಲೆನಾಡು ಮಾತ್ರವಲ್ಲದೇ ಒಳನಾಡು ಜಿಲ್ಲೆಗಳಿಗೂ ಸಾಧಾರಣದಿಂದ ಭಾರೀ ಮಳೆ ಬರಲಿದೆ. ಗರಿಷ್ಠ 200 ಮಿಲಿ ಮೀಟರ್‌ವರೆಗೆ ಮಳೆ ಸಂಭವವಿದ್ದು, ಆಯಾ ಜಿಲ್ಲೆಗಳ ಶಾಲೆಗಳಿಗೆ ಮತ್ತೆ ಮಳೆ ರಜೆ ಘೋಷಣೆ ಆಗಬಹುದು ಎಂದು ಹೇಳಲಾಗ್ತಾ ಇದೆ.
ಆಗಸ್ಟ್ 6 ರಿಂದ ಮೂರು ದಿನ ಹಾಸನ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಆಗಲಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಕರ್ನಾಟಕ ಕೇಂದ್ರದ ವಿಜ್ಞಾನಿಗಳು ಮುನ್ಸೂಚನೆಯಲ್ಲಿ ತಿಳಿಸಿದ್ದಾರೆ.