
Mangalore: ಪುತ್ತೂರು ಮೂಲದ ಪಶುವೈದ್ಯೆ ಡಾ. ಕೀರ್ತನಾ ಜೋಶಿ ಆತ್ಮಹತ್ಯೆಗೆ ಶರಣು
06/08/2025
ಪುತ್ತೂರು ಮೂಲದ ಯುವ ಪಶುವೈದ್ಯೆಯೊಬ್ಬರು ಮಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಗಳೂರಿನಲ್ಲಿ ಪಶು ವೈದ್ಯೆಯಾಗಿದ್ದ ಡಾ.ಕೀರ್ತನಾ ಜೋಶಿ(27) ಆತ್ಮಹತ್ಯೆಗೆ ಶರಣಾದವರು.
ಡಾ.ಕೀರ್ತನಾ ಅವರು ಪುತ್ತೂರು ತಾಲೂಕಿನ ಬಪ್ಪಳಿಗೆ ನಿವಾಸಿ, ಚಾರ್ಟಡ್ ಅಕೌಂಟೆಂಟ್ ಗಣೇಶ್ ಜೋಶಿ ಅವರ ಪುತ್ರಿ. ಇವರು ಮಂಗಳೂರಿನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪಶು ವೈದ್ಯಕೀಯದಲ್ಲಿ ಎಂ.ಡಿ. ಶಿಕ್ಷಣ ಪೂರೈಸಿದ್ದ ಡಾ. ಕೀರ್ತನಾ ಜೋಶಿ ಅವರು ಪುತ್ತೂರು, ಕೊಯಿಲ ಹಾಗೂ ಮಂಗಳೂರಿನಲ್ಲಿ ಖಾಸಗಿಯಾಗಿ ವೈದ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮೃತರು ತಂದೆ ಗಣೇಶ್ ಜೋಶಿ, ತಾಯಿ ವೀಣಾ ಜೋಶಿ, ಸಹೋದರಿ ಡಾ. ಮೇಘನಾ ಜೋಶಿ ಅವರನ್ನು ಅಗಲಿದ್ದಾರೆ