Gangolli: ಜಾನುವಾರು ಕಳ್ಳತನ ಪ್ರಕರಣ; ಓರ್ವ ಆರೋಪಿಯ ಬಂಧನ

Gangolli: ಜಾನುವಾರು ಕಳ್ಳತನ ಪ್ರಕರಣ; ಓರ್ವ ಆರೋಪಿಯ ಬಂಧನ


ಗಂಗೊಳ್ಳಿಯಲ್ಲಿ ನಡೆದ ಜಾನುವಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂಡಬಿದ್ರೆ ತೋಡಾರು ನಿವಾಸಿ ಮೊಹಮ್ಮದ್ ಅನ್ಸಾರ್ ಬಂಧಿತ ಆರೋಪಿ.


ಜುಲೈ 31ರಂದು ಮೇಲ್ ಗಂಗೊಳ್ಳಿ ಪರಿಸರದಲ್ಲಿ ಕ್ರೇಟಾ ಕಾರಿನಲ್ಲಿ ಜಾನುವಾರುಗಳನ್ನು ತುಂಬಿಸಿ ಸಾಗಾಟ ಮಾಡಲಾಗಿತ್ತು. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಗಂಗೊಳ್ಳಿ ಠಾಣಾ ಪೊಲೀಸರು ಉಡುಪಿ ಎಸ್‌ಪಿ ಹರಿರಾಂ ಶಂಕರ್ ನಿರ್ದೇಶನದಲ್ಲಿ ಗಂಗೊಳ್ಳಿ ಠಾಣಾ ಪಿಎಸ್‌ಐ ಪವನ್ ನಾಯ್ಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿ ಮೊಹಮ್ಮದ್ ಅನ್ಸಾರ್‌ನನ್ನು ಮಂಗಳೂರು ಹೊರ ವಲಯದ ತೊಕ್ಕೊಟ್ಟು ಸಮೀಪ ಬಂಧಿಸಿದ್ದಾರೆ. 




ಬಂಧಿತನನ್ನು ಗಂಗೊಳ್ಳಿಗೆ ಕರೆ ತಂದು ಸ್ಥಳ ಮಹಜರು ನಡೆಸಲಾಗಿದೆ. ಪ್ರಕರಣದ ಉಳಿದ ಆರೋಪಿಗಳಾದ ಬಿಸಿ ರೋಡಿನ ಜುಬೈರ್, ಆರೀಫ್, ಇಕ್ಬಾಲ್ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ದನಗಳ್ಳರು ಕಾರಿನ ನೋಂದಣಿ ಸಂಖ್ಯೆ ಬದಲಾಯಿಸಿ ಕೃತ್ಯವನ್ನು ಎಸಗುತ್ತಿದ್ದು, ತನಿಖೆಯಲ್ಲಿ ಬಯಲಾಗಿದೆ. 


ಗಂಗೊಳ್ಳಿ ಠಾಣಾ ಪಿಎಸ್‌ಐಗಳಾದ ಪವನ್ ನಾಯ್ಕ್ ಮತ್ತು ಬಸವರಾಜ್ ಕನಶೆಟ್ಟಿ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಕೃಷ್ಣ, ಶಾಂತರಾಮ ಶೆಟ್ಟಿ, ಚೇತನ್, ಪ್ರಸನ್ನ, ರಾಘವೇಂದ್ರ ಪೂಜಾರಿ ಹಾಗೂ ಸಂದೀಪ್ ಪುರಾಣಿಕ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

 


Ads on article

Advertise in articles 1

advertising articles 2

Advertise under the article