
Mangalore: ದೇಶದಲ್ಲೇ ಅತೀ ಸುರಕ್ಷಿತ ನಗರ ಮಂಗಳೂರು; ವಿಶ್ವದಲ್ಲಿ 49ನೇ ಸ್ಥಾನ
07/08/2025
ಸುರಕ್ಷಿತ ನಗರಗಳ ಪೈಕಿ ದೇಶದಲ್ಲಿಯೇ ಮಂಗಳೂರು ನಗರ ಮೊದಲನೇ ಸ್ಥಾನ ಪಡೆದಿದೆ. ಅಲ್ಲದೇ ವಿಶ್ವದಲ್ಲಿ 49ನೇ ಸ್ಥಾನ ಪಡೆದಿದೆ. ಸ್ವತಂತ್ರ ಬಳಕೆದಾರರ ಜಾಗತಿಕ ಡಾಟಾಬೇಸ್ ಆಗಿರುವ "ನಂಬಿಯೋ" ತನ್ನ 2025ರ ವರ್ಷದ ಮಧ್ಯ ಭಾಗದ ಪಟ್ಟಿ ಬಿಡುಗಡೆಗೊಳಿಸಿದ್ದು, ಇದರಲ್ಲಿ ಮಂಗಳೂರು ಅಗ್ರಸ್ಥಾನ ಗಿಟ್ಟಿಸಿಕೊಂಡಿದೆ.
ವಿಶ್ವದಾದ್ಯಂತ ಭಾರತವು 55.8ರ ಸಾಧಾರಣ ಸುರಕ್ಷತಾ ಅಂಕಗಳೊಂದಿಗೆ 67ನೇ ಸ್ಥಾನದಲ್ಲಿದೆ. ಅದರಲ್ಲಿ ಸ್ವಚ್ಛ ಬೀದಿಗಳು, ಶಿಸ್ತುಬದ್ಧ ನಾಗರಿಕ ವ್ಯವಸ್ಥೆ, ಹಗಲುಯ ಮತ್ತು ರಾತ್ರಿ ವೇಳೆಯಲ್ಲಿ ಜನರು ತಮ್ಮ ದೈನಂದಿನ ಜೀವನದಲ್ಲಿ ಸುರಕ್ಷಿತರಾಗಿರುವ ಬಗ್ಗೆ ವಿಶ್ಲೇಷಿಸಿ ಮಂಗಳೂರು ನಗರವನ್ನು ಸುರಕ್ಷಿತ ನಗರವೆಂದು ಪರಿಗಣಿಸಲಾಗಿದೆ.