
Udupi: ಪಿಗ್ಮಿ ಸಂಗ್ರಹಕನ ಹಣ ದೋಚಿದ ಅಂತರ್‌ರಾಜ್ಯ ಕಳ್ಳನ ಬಂಧನ
06/08/2025
ಉಡುಪಿ ಜಿಲ್ಲೆಯ ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣ ಸೇರಿದಂತೆ ಹಲವಾರು ಪ್ರಕರಣದಲ್ಲಿ ಭಾಗಿಯಾಗಿರುವ ಅಂತರ್‌ರಾಜ್ಯ ಕಳ್ಳನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಿಜಾಪುರದ ಸಂತೋಷ್ ಹನುಮಂತ ಕಟ್ಟಿಮನಿ (39) ಎಂದು ಗುರುತಿಸಲಾಗಿದೆ. ಈತನಿಂದ 36000ರೂಪಾಯಿ ಮೌಲ್ಯದ ನಗದು ಹಾಗೂ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸೊಸೈಟಿಯೊಂದರ ಪಿಗ್ಮಿ ಸಂಗ್ರಹಕರೊಬ್ಬರು ಬ್ರಹ್ಮಾವರ ಶಿವಳ್ಳಿ ಹೊಟೇಲ್ ಎದುರುಗಡೆ ಕರ್ನಾಟಕ ಬ್ಯಾಂಕ್ ಎಟಿಎಂ ಬಳಿ ಪಿಗ್ಮಿ ಸಂಗ್ರಹಿಸಿದ ಹಣವನ್ನು ಬೈಕ್‌ನ ಸೈಡ್ ಬಾಕ್ಸ್ನಲ್ಲಿಟ್ಟು ಬೀಗ ಹಾಕಿ ತೆರಳಿದ್ದರು. ಆರೋಪಿ ಹನುಮಂತ ಕಟ್ಟಿಮನಿ ಹಣವನ್ನು ದೋಚಿ ಪರಾರಿಯಾಗಿದ್ದ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಬ್ರಹ್ಮಾವರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನ ವಿರುದ್ಧ ಹಲವು ಪ್ರಕರಣಗಳಿವೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.