
Dharmasthala: ಸರಣಿ ಶವ ಹೂತ ಪ್ರಕರಣ; 13ನೇ ಪಾಯಿಂಟ್ ನಲ್ಲಿ ಶೋಧ
06/08/2025
ಧರ್ಮಸ್ಥಳದಲ್ಲಿ ಹಲವು ಶವಗಳನ್ನು ಹೂತಿರುವ ಪ್ರಕರಣ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡದ ಶೋಧ ಕಾರ್ಯ ಅಂತಿಮ ಘಟ್ಟ ತಲುಪಿದೆ. ಆಗಸ್ಟ್ 6ರಂದು ದೂರುದಾರ ಗುರುತಿಸಿದ ಕೊನೆಯ 13ನೇ ಪಾಯಿಂಟ್ ನಲ್ಲಿ ಶೋಧ ನಡೆಸಲಾಗುತ್ತಿದೆ.
ದೂರುದಾರ ತೋರಿಸಿದ ೧೩ ಸ್ಥಳಗಳ ಪೈಕಿ 12 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು. ದೂರುದಾರ ಗುರುತಿಸಿದ ಒಂದು ಪಾಯಿಂಟ್ ನಲ್ಲಿ ಮಾತ್ರ ಕಳೇಬರ ಪತ್ತೆಯಾಗಿತ್ತು. ಅಲ್ಲದೇ 11ನೇ ಪಾಯಿಂಟ್ ನ ಮೇಲ್ಭಾಗದಲ್ಲಿ ಅವಶೇಷಗಳು ಪತ್ತೆಯಾಗಿತ್ತು.
ಆಗಸ್ಟ್ 6ರಂದು ಬೆಳಗ್ಗೆ 11 ಗಂಟೆಗೆ ಎಸ್ ಐಟಿ ಅಧಿಕಾರಿಗಳು ದೂರುದಾರನ ಜೊತೆ ನೇತ್ರಾವತಿ ತಟದತ್ತ ಆಗಮಿಸಿ ಶೋಧ ಕಾರ್ಯ ಕೈಗೊಂಡಿದ್ದಾರೆ. ದೂರುದಾರ ಗುರುತಿಸಿರುವ್ 13 ಪಾಯಿಂಟ್ನಲ್ಲಿ ಶೋಧ ಕಾರ್ಯ ಇಂದಿಗೆ ಮುಕ್ತಾಯವಾಗಲಿದೆ. ಕೊನೆಯ ಪಾಯಿಂಟ್ ನಲ್ಲಿ ಅಗೆಯುವ ಕಾರ್ಯ ನಡೆಸಲಾಗುತ್ತಿದ್ದು, ಕುತೂಹಲ ಹೆಚ್ಚಿದೆ.