
Bantwala: ಗಾಳಿ- ಮಳೆಯ ಅವಾಂತರ; ಕೃಷಿ ತೋಟಗಳಿಗೆ ಹಾನಿ
28/07/2025
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಅವಾಂತರ ಸೃಷ್ಟಿಸಿದೆ. ತಡರಾತ್ರಿ ಬಿರುಗಾಳಿ ಸಹಿತ ಮಳೆಯಾಗಿದ್ದು, ಬಂಟ್ವಾಳದ ಕೃಷಿ ತೋಟಗಳಿಗೆ ಹಾನಿಯಾಗಿದೆ.
ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ನೂಜಿ ಭಾಗದಲ್ಲಿ 15ಕ್ಕೂ ಹೆಚ್ಚು ಕೃಷಿಕರ ಕೃಷಿ ತೋಟಗಳಲ್ಲಿ ಅಡಿಕೆ ಮರಗಳು, ತೆಂಗಿನ ಮರಗಳು ಧರಾಶಾಹಿಯಾಗಿದೆ. ನೂಜಿ ಅಳಾಬೆಯ ನಾರಾಯಾಣ ಮೂಲ್ಯ ಅವರ ಕೃಷಿ ತೋಟಗಳಿಗೆ ಹಾನಿಯಾಗಿದ್ದು, ಮನೆಗೆ ಅಡಿಕೆ ಮರ ಬಿದ್ದು ಮೇಲ್ಛಾವಣಿಗೆ ಹಾನಿಯಾಗಿದೆ.