
Shimogga: ಯುವತಿಯ ತುರ್ತು ಚಿಕಿತ್ಸೆಗಾಗಿ ಮುಂಬೈಗೆ ಏರ್‌ಲಿಫ್ಟ್; ಝೀರೋ ಟ್ರಾಫಿಕ್‌ನಲ್ಲಿ ರವಾನೆ
ಶಿವಮೊಗ್ಗದ ಆಸ್ಪತ್ರೆಯಲ್ಲಿ ಜ್ವರದಿಂದ ಬಳಲುತ್ತಿದ್ದ ಯುವತಿಯೊಬ್ಬಳನ್ನು ತುರ್ತು ಚಿಕಿತ್ಸೆೆಗಾಗಿ ಮುಂಬೈಗೆ ಏರ್ ಲಿಫ್ಟ್ ಮಾಡಲಾಗಿದೆ.
ಶಿವಮೊಗ್ಗದ ಗಾಂಧಿ ಬಜಾರ್ ನಿವಾಸಿ ಮನೋಜ್ ಹಾಗೂ ಮನೀಷಾ ಅವರ ಪುತ್ರಿ ಮಾನ್ಯ ಜೈನ್ (21) ಒಂದು ವಾರದಿಂದ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದರು. ಜ್ವರ ಹೆಚ್ಚಾಗಿ ಲಿವರ್ ಫೈಲ್ ಆಗಿದೆ. ನಂತರ ಉಸಿರಾಟದ ಸಮಸ್ಯೆ ಉಂಟಾಗಿದೆ. ಹಾಗಾಗಿ ಇವರನ್ನು ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಿಂದ ಮುಂಬೈನ ಕೋಕಿಲಬೆನ್ ಆಸ್ಪತ್ರೆಗೆ ಖಾಸಗಿ ವಿಮಾನದ ಮೂಲಕ ಏರ್‌ಲಿಫ್ಟ್ ಮಾಡಲಾಯಿತು.
ಮಾನ್ಯ ಜೈನ್ ಅವರನ್ನು ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಿಂದ ಆಂಬ್ಯುಲೆನ್ಸ್ನಲ್ಲಿ ಜೀರೋ ಟ್ರಾಫಿಕ್ ಮೂಲಕ ಶಿವಮೊಗ್ಗ ಹೊರವಲಯದ ಸೋಗಾನೆಯ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗಲಾಯಿತು. ಅಲ್ಲಿಂದ ವಿಮಾನದ ಮೂಲಕ ಮುಂಬೈಗೆ ಕರೆದೊಯ್ಯಲಾಯಿತು. ಮಾನ್ಯ ಅವರ ಜೊತೆ ಆಕೆಯ ಪೋಷಕರು ತೆರಳಿದ್ದಾರೆ. ಕೋಕಿಲಬೆನ್ ಆಸ್ಪತ್ರೆಯಲ್ಲಿ ಲಿವರ್ ಟ್ರಾನ್ಸ್ಪ್ಲ್ಯಾಂಟ್ ಮಾಡುವ ಅವಕಾಶ ಇದೆ. ಅಲ್ಲದೆ ಮಾನ್ಯ ಜೈನ್ ಪೋಷಕರು ಮುಂಬೈಗೆ ಹೋದರೆ ಮಗಳಿಗೆ ಬೇಗ ಆಪರೇಷನ್ ಮಾಡಬಹುದೆಂದು ಏರ್‌ಲಿಫ್ಟ್ ನಿರ್ಧಾರಕ್ಕೆ ಬಂದಿದ್ದಾರೆ. ಜೀರೋ ಟ್ರಾಫಿಕ್‌ಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಸಹಕಾರ ನೀಡಿದ್ದಾರೆ.