
Malpe: ಹೂಡೆ ಬೀಚಲ್ಲಿ ನೀರುಪಾಲಾಗುತ್ತಿದ್ದವರ ರಕ್ಷಣೆ; ಓರ್ವ ಗಂಭೀರ
10/08/2025
ಉಡುಪಿಯ ಹೂಡೆ ಬೀಚ್ ನಲ್ಲಿ ನೀರು ಪಾಲಾಗುತ್ತಿದ್ದ ಮೂವರು ಪ್ರವಾಸಿಗರನ್ನು ಸ್ಥಳೀಯ ನಿವಾಸಿ ರಾಜ ಎಂಬವರು ರಕ್ಷಿಸಿದ ಘಟನೆ ನಡೆದಿದೆ.
ಹೂಡೆ ಸಮುದ್ರ ಕಿನಾರೆಯಲ್ಲಿ ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಸೇರುತ್ತಾರೆ. ಕಡಲು ಪ್ರಕ್ಷುಬ್ದಗೊಂಡಿದ್ದು, ಜಿಲ್ಲಾಡಳಿತದ ಸೂಚನೆ ಪಾಲಿಸದೇ ಕಡಲಿಗೆ ಇಳಿಯುತ್ತಾರೆ. ಆಗಸ್ಟ್ 10ರಂದು ಕೂಡಾ ಪ್ರವಾಸಿಗರು ನೀರಿಗೆ ಇಳಿದಿದ್ದಾರೆ. ನೀರಿನ ಸೆಳೆತಕ್ಕೆ ಸಿಲುಕಿ ಮುಳುಗುತ್ತಿದ್ದ ಪ್ರವಾಸಿಗರನ್ನು ಸ್ಥಳೀಯ ನಿವಾಸಿ ರಾಜ ಎಂಬ ಒಬ್ಬರೇ ಮೂವರನ್ನು ರಕ್ಷಣೆ ಮಾಡಿದ್ದಾರೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಓರ್ವನ ಸ್ಥಿತಿ ಗಂಭೀರವಾಗಿದೆ. ಮಲ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.