
Dharmasthala: ಯೂಟ್ಯೂಬರ್ಗಳ ಮೇಲೆ ಗುಂಪು ಹಲ್ಲೆ; ಸ್ಥಳದಲ್ಲಿ ಉದ್ವಿಗ್ನ, ಪೊಲೀಸರಿಂದ ಲಾಠಿ ಪ್ರಹಾರ
06/08/2025
ಧರ್ಮಸ್ಥಳದಲ್ಲಿ ನಾಲ್ಕು ಮಂದಿ ಯೂಟ್ಯೂಬರ್ಗಳ ಮೇಲೆ ಗುಂಪೊದು ಹಲ್ಲೆ ನಡೆಸಿದ್ದು, ಸ್ಥಳದಲ್ಲಿ ಜಮಾಯಿಸಿದ ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಹಲ್ಲೆಗೆ ಒಳಗಾದವರು ಅಜಯ್ ಅಂಚನ್, ಅಭಿಷೇಕ್, ವಿಜಯ್ ಹಾಗೂ ಇನ್ನೊರ್ವ ಸೌಜನ್ಯಪರ ಹೋರಾಟಗಾರ ಯೂಟ್ಯೂಬರ್ ಎಂದು ತಿಳಿದು ಬಂದಿದೆ. ಧರ್ಮಸ್ಥಳದಲ್ಲಿ ಎಸ್ಐಟಿ ತಂಡದಿಂದ ಶೋಧ ಕಾರ್ಯ ನಡೆಸುವ ಸ್ಥಳದಲ್ಲಿದ್ದ ಯೂಟ್ಯೂಬರ್ ಗಳ ಮೇಲೆ ಗುಂಪು ಹಲ್ಲೆ ನಡೆಸಿದೆ.
ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಜನರು ಜಮಾಯಿಸಿರುವುದರಿಂದ ಪೊಲೀಸರು ಲಾಠಿ ಪ್ರಹಾರ ಮಾಡಿ ಗುಂಪು ಚದುರಿಸುತ್ತಿದ್ದಾರೆ.