Moodabidre: ಪಾಲಡ್ಕ ಹೊಸ ಬೆಳಕು ಸೇವಾ ಬಳಗದ ವಾರ್ಷಿಕೋತ್ಸವ; ಅಶಕ್ತರಿಗೆ ನೆರವು

Moodabidre: ಪಾಲಡ್ಕ ಹೊಸ ಬೆಳಕು ಸೇವಾ ಬಳಗದ ವಾರ್ಷಿಕೋತ್ಸವ; ಅಶಕ್ತರಿಗೆ ನೆರವು


ಕಡಂದಲೆ- ಪಾಲಡ್ಕ ಕಾಂತಾವರ ವಲಯದ ಹೊಸ ಬೆಳಕು ಸಮಾಜ ಸೇವಾ ಬಳಗದ ಪ್ರಥಮ ವಾರ್ಷಿಕೋತ್ಸವ ಸಮಾರಂಭವು ಕಡಂದಲೆ- ಪಾಲಡ್ಕ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಸಭಾಭವನದಲ್ಲಿ ನಡೆಯಿತು. ಸಮಾರಂಭವನ್ನು ಕಟೀಲು ಮೇಳದ ಅರ್ಚಕ ಗುರುಪ್ರಸಾದ್ ಭಟ್ ಎಣ್ಣೆಕಲ ಉದ್ಘಾಟಿಸಿದರು. 


ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾನವೀಯ ಮೌಲ್ಯ, ನಿಸ್ವಾರ್ಥ ಸೇವೆ ಸಾರ್ಥಕ ಬದುಕಿನ ಅಮೂಲ್ಯ ರತ್ನಗಳು. ಸಂಘಟನೆಯನ್ನು ಸ್ಥಾಪಿಸುವುದು ಮಾತ್ರವಲ್ಲ ಸೇವಾ ಚಟುವಟಿಕೆಗಳನ್ನು ರೂಪಿಸಿ, ಅದನ್ನು ಸಮರ್ಥವಾಗಿ ಅನುಷ್ಠಾನಗೊಳಿಸುವ ಕೆಲಸವಾಗಬೇಕು. ಕಡಂದಲೆ, ಕಲ್ಲಮುಂಡ್ಕೂರು, ಕಾಂತಾವರ ಪರಿಸರದಲ್ಲಿ ಹೊಸ ಬೆಳಕು ಸಂಘಟನೆಯು ತಮ್ಮ ವಿಶಿಷ್ಟ ಸೇವೆಯ ಮೂಲಕ ಅಶಕ್ತರ ಬಾಳಿಗೆ ಹೊಸ ಬೆಳಕು ನೀಡುತ್ತಿದೆ ಎಂದು ಕೇಮಾರು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು. 


ಮೋಹನ್ ದಾಸ್ ಅಡ್ಯಂತಾಯ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ, ಸಮಾಜ ಸೇವಕ ರವಿ ಕಟಪಾಡಿ ಹಾಗೂ ಹ್ಯೂಮಾನಿಟಿ ಸಂಸ್ಥೆಯ ಸ್ಥಾಪಕ ರೋಶನ್ ಬೆಳ್ಮಣ್ ಅವರನ್ನು ಸನ್ಮಾನಿಸಲಾಯಿತು.




ಈ ವೇಳೆ ಅಶಕ್ತರಿಗೆ ಆರ್ಥಿಕ ನೆರವಿನ ಚೆಕ್ ಹಸ್ತಾಂತರಿಸಲಾಯಿತು, ಕಾರ್ಯಕ್ರಮದಲ್ಲಿ ಕೆಎಂಎಫ್ ನಿರ್ದೇಶಕ ಕೆ.ಪಿ ಸುಚರಿತ ಶೆಟ್ಟಿ, ಯುವವಾಹಿನಿ ಮೂಡಬಿದಿರೆ ಘಟಕಾಧ್ಯಕ್ಷ ಮುರಳೀಧರ ಎಸ್.ಕೋಟ್ಯಾನ್, ಖಲಂದರ್ ಚಾರಿಟೇಬಲ್ ಟ್ರಸ್ಟ್ನ ಸುಲೇಮಾನ್ ಶೇಖ್ ಬೆಳುವಾಯಿ, ಉದ್ಯಮಿ ರಘುನಾಥ ದೇವಾಡಿಗ, ಜೆಸಿಐ ವಲಯ 15ರ ಉಪಾಧ್ಯಕ್ಷ ಪ್ರಶಾಂತ್ ಕುಮಾರ್ ಪಾಲಡ್ಕ, ಹೊಸಬೆಳಕು ಸಂಘಟನಯ ಸ್ಥಾಪಕ ಮಹೇಶ್ ಜೆ. ಕೋಟ್ಯಾನ್, ಗೌರವಾಧ್ಯಕ್ಷ ಉದಯ ಶೆಟ್ಟಿ ಪಾಲಡ್ಕ ಮೊದಲಾದವರು ಇದ್ದರು.   



Ads on article

Advertise in articles 1

advertising articles 2

Advertise under the article