Udupi: ಪೊಲೀಸರ ಮೇಲೆ ಕಾರು ಹರಿಸಿದ ದನಗಳ್ಳರು; ಓರ್ವ ಆರೋಪಿ ಅರೆಸ್ಟ್ (Video)

Udupi: ಪೊಲೀಸರ ಮೇಲೆ ಕಾರು ಹರಿಸಿದ ದನಗಳ್ಳರು; ಓರ್ವ ಆರೋಪಿ ಅರೆಸ್ಟ್ (Video)



ಉಡುಪಿ ಜಿಲ್ಲೆಯಲ್ಲಿ ದನಗಳ್ಳರ ಹಾವಳಿ ಹೆಚ್ಚುತ್ತಿದ್ದು, ಪೊಲೀಸರ ನಿದ್ದೆಗೆಡಿಸಿದೆ. ಕಳೆದ ಒಂದು ತಿಂಗಳಿನಿ0ದ ದನಗಳ್ಳತನದ ಪ್ರಕರಣಗಳು ಹೆಚ್ಚುತ್ತಿವೆ. ಹತ್ತಕ್ಕೂ ಅಧಿಕ ದನಗಳ್ಳತನದ ಪ್ರಕರಣಗಳು ಉಡುಪಿ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸುಳ್ಯ ಮಂಗಳೂರು ಭಾಗದಿಂದ ಬಂದು ಉಡುಪಿ ಜಿಲ್ಲೆಯಲ್ಲಿ ಕೃತ್ಯ ನಡೆಸುತ್ತಿದ್ದಾರೆ.  ದನಗಳ್ಳರ ಕೃತ್ಯವನ್ನು ಮಟ್ಟ ಹಾಕಿಯೇ ಸಿದ್ಧ ಅಂತ ಪೊಲೀಸರು ಹಗಲು ರಾತ್ರಿ ಕಾರ್ಯಾಚರಣೆಗೆ ಇಳಿದಿದ್ದಾರೆ..


ಕಳೆದ ಒಂದು ತಿಂಗಳಿನಿ0ದ ಈಚೆಗೆ ರಾತ್ರಿ ವೇಳೆ ಬೀಡಾಡಿ ದನಗಳನ್ನು ಹಿಂಸಾತ್ಮಕವಾಗಿ ವಾಹನದಲ್ಲಿ ಎಳೆದೊಯ್ದು ಸಾಗಾಟ ಮಾಡಲಾಗುತ್ತಿದೆ. ನಕಲಿ ನೋಂದಣಿ ಇರುವ ಕಾರುಗಳನ್ನು ಬಳಸಿ ಜಾನುವಾರುಗಳನ್ನು ಕಳವು ಮಾಡಲಾಗುತ್ತಿದೆ. ಮಂಗಳೂರು ಭಾಗದ ಸುಳ್ಯ, ಉಳ್ಳಾಲ ಭಾಗದ ದನಗಳ್ಳರು ಉಡುಪಿ ಜಿಲ್ಲೆಯಲ್ಲಿ ಜಾನುವಾರುಗಳನ್ನು ಕದ್ದು, ಮಂಗಳೂರು ಕಡೆಗೆ ತೆರಳುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಹಲವು ದನಗಳ್ಳತನ ಪ್ರಕರಣಗಳನ್ನು ಈಗಾಗಲೇ ಬೇಧಿಸಿ, ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಆದರೆ ಮತ್ತೆ ಮತ್ತೆ ದನಗಳ್ಳತನ ಪ್ರಕರಣಗಳು ದಾಖಲಾಗುತ್ತಿದೆ. 

                                                        (ಕೃತ್ಯಕ್ಕೆ ಬಳಸಿದ ಕಾರು)
ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ದನಗಳ್ಳತನ ಪ್ರಕರಣಕ್ಕೆ ಸಂಬ0ಧಿಸಿ ಆಗಸ್ಟ್ ಕಳೆದ ಮರ‍್ನಾಲ್ಕು ದಿನಗಳಿಂದ ಹಗಲು ರಾತ್ರಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.  ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರಿರಾಂ ಶಂಕರ್ ಅವರ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಠಾಣಾ ಎಸ್‌ಐ ಪವನ್ ನಾಯಕ್ ನಿರ್ದೇಶನದಲ್ಲಿ ಗಂಗೊಳ್ಳಿ ಠಾಣಾ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ರಾತ್ರಿ ವೇಳೆ ಜಾನುವಾರುಗಳನ್ನು ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಪಡೆದ ಪೊಲೀಸರ ತಂಡ ಹೆಜಮಾಡಿ ಟೋಲ್‌ಗೇಟ್ ಹಾಗೂ ಮೂಲ್ಕಿಯಲ್ಲಿ ಬ್ಯಾರಿಕೇಡ್‌ಗಳನ್ನು ಇಟ್ಟು ಕಾರ್ಯಾಚರಣೆಗೆ ಇಳಿದಿದ್ದಾರೆ. 


ಜಾನುವಾರು ಸಾಗಾಟದ ಫಾರ್ಚೂನರ್ ಕಾರು ಹೆಜಮಾಡಿ ಟೋಲ್‌ಗೇಟ್‌ಗೆ ಬರುತ್ತಿದ್ದಂತೆ ಖಾಸಗಿ ಕಾರಿನಲ್ಲಿದ್ದ ಪೊಲೀಸರು ಫಾರ್ಚೂನರ್ ಕಾರನ್ನು ಸುತ್ತುವರಿದು ವಶಕ್ಕೆ ಪಡೆಯಲು ಮುಂದಾದರು. ಕಾರಿನಲ್ಲಿದ್ದ ಆರೋಪಿಗಳಾದ ಶಾರೋಜ್, ಸಫ್ವಾನ್ ಕಾಪು, ಅಜೀಂ ಕಾಪು ಮತ್ತು ರಾಜಿಕ್‌ನನ್ನು ವಶಕ್ಕೆ ಪಡೆಯಲು ಮುಂದಾದಾಗ ಏಕಾಏಕಿ ಪೊಲೀಸರ ಮೇಲೆ ಕಾರು ಹಾಯಿಸಿ ಕೊಲೆಗೆ ಯತ್ನಿಸಿದ್ದಾರೆ. ಘಟನೆಯಲ್ಲಿ ಪಿಎಸ್‌ಐ ಬಸವರಾಜ್ ಕನಶೆಟ್ಟಿ, ಸಿಬ್ಬಂದಿ ಸಂದೀಪ್ ಅವರಿಗೆ ಗಾಯಗಳಾಗಿದೆ. ಪಕ್ಕದಲ್ಲೇ ನಿಲ್ಲಿಸಿದ್ದ ಟೋಲ್ ಪೆಟ್ರೋಲಿಂಗ್ ವಾಹನಕ್ಕೂ ಕಾರು ಡಿಕ್ಕಿ ಹೊಡೆಸಿದ್ದು, ವಾಹನ ಚಾಲಕ ಲೋಹಿತ್ ಎಂಬವರಿಗೂ ಗಾಯಗಳಾಗಿವೆ. ದನಗಳ್ಳರ ಕಾರ್ಯಾಚರಣೆಯ ಮಾಹಿತಿ ಪಡೆಯುತ್ತಿದ್ದ ಎಸ್ಪಿ ಹರಿರಾಂ ಶಂಕರ್ ಅವರು ಘಟನೆ ನಡೆದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೇ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ, ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದರು.

ಇನ್ನು ಪೊಲೀಸರ ಮೇಲೆ ಆರು ಹಾಯಿಸಿ ಕೊಲೆಗೆ ಯತ್ನಿಸಿರುವ ಆರೋಪಿ ಮಹಮ್ಮದ್ ಶಾರೋಜ್‌ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕೊಲೆಗೆ ಯತ್ನಿಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಗೆ ಯತ್ನಿಸಿರುವ ಬಗ್ಗೆ ಮೂರು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಅಲ್ಲದೇ ಎಸ್ಪಿ ಹರಿರಾಂ ಶಂಕರ್ ಅವರು ಈಗಾಗಲೇ 5 ತಂಡಗಳನ್ನು ರಚಿಸಿದ್ದು, ಕಾರ್ಯಾಚರಣೆ ಮುಂದುವರಿದಿದೆ.




Ads on article

Advertise in articles 1

advertising articles 2

Advertise under the article