
Dharmasthala: ಸರಣಿ ಶವ ಹೂತ ಪ್ರಕರಣ; ದೂರುದಾರನ ಪರ ಹೇಳಿಕೆ ನೀಡಲು ಮುಂದೆ ಬಂದ 6 ಜನ
06/08/2025
ಧರ್ಮಸ್ಥಳದಲ್ಲಿ ಶವಗಳ ಹೂತಿರುವ ಪ್ರಕರಣ ವಿವಿಧ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದೀಗ ದೂರುದಾರನ ಪರವಾಗಿ ಹೇಳಿಕೆ ನೀಡಲು 6 ಜನ ಸ್ಥಳೀಯರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಈ ಬಗ್ಗೆ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇನ್ನು 15 ವರ್ಷಗಳ ಹಿಂದೆ ಬಾಲಕಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಪ್ರಕರಣವನ್ನು ಎಸ್‌ಐಟಿ ಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ಹೊಸ ಊರುದಾರ ಟಿ. ಜಯಂತ್ ಅವರು ಬಾಲಕಿಯ ಶವವನ್ನು ಕಣ್ಣಾರೆ ನೋಡಿರುವುದಾಗಿ ಸಾಕ್ಷಿ ಹೇಳಿದ್ದರು. ಅಲ್ಲದೇ ದೂರು ದಾಖಲಿಸಿದ್ದರು. ಇದೀಗ ಪ್ರಕರಣವನ್ನು ಎಸ್‌ಐಟಿ ಸುಪರ್ದಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.