
Mangalore: ಗಿನ್ನೆಸ್ ರೆಕಾರ್ಡ್ ಈಜುಪಟು ಹೃದಯಾಘಾತದಿಂದ ಈಜುಕೊಳದಲ್ಲೇ ಮೃತ್ಯು
10/08/2025
ಈಜಿನಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿದ್ದ ಈಜುಪಟು ಕೆ. ಚಂದ್ರಶೇಖರ್ ರೈ ಸೂರಿಕುಮೇರು ಅವರು ನಿಧನರಾಗಿದ್ದಾರೆ.
ಮಂಗಳೂರು ಲೇಡಿಹಿಲ್‌ನಲ್ಲಿರುವ ಪಾಲಿಕೆಯ ಈಜುಕೊಳದ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿದ್ದ ಚಂದ್ರಶೇಖರ್ ರೈ ಅವರು ಈಜುಕೊಳದಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಚಂದ್ರಶೇಖರ್ ರೈ ಅವರು 2023ರಲ್ಲಿ ಈಜುಕೊಳದ ನೀರಿನೊಳಗೆ ಒಂದು ನಿಮಿಷದಲ್ಲಿ 28 ಬಾರಿ ಸಮ್ಮರ್ ಸಾಲ್ಟ್ ಎಂಬ ಸ್ಟಂಟ್ ಮಾಡಿ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದಿದ್ದರು.