
Udupi: ಕೊಡಂಗಳದಲ್ಲಿ ಕೆಸರುಗದ್ದೆ ಓಟ; ಕೆಸರು ಮಣ್ಣಿನಲ್ಲಿ ಗ್ರಾಮೀಣ ಸೊಗಡಿನ ಆಟ
13/08/2025
ಶ್ರೀರಾಮ ಭಜನಾ ಮಂಡಳಿ, ಕೊಡಂಗಳ ಹಾಗೂ ಲಯನ್ಸ್ ಕ್ಲಬ್ ಉಡುಪಿ ವತಿಯಿಂದ 'ಕೆಸರುಗದ್ದೆ ಆಟ', ಭಾನುವಾರ ಕೊಡಂಗಳದ ಕುಟ್ಟಿ ನಾಯ್ಕರ ಗದ್ದೆಯಲ್ಲಿ ನಡೆಯಿತು.
ಖ್ಯಾತ ಛಾಯಾಗ್ರಾಹಕ ಫೊಕಸ್ ರಾಘು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷ ಅಲೆವೂರು ದಿನೇಶ್ ಕಿಣಿ, ಮಣಿಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಚೈತ್ರಾ ಭೂವರಾಹ ಆಚಾರ್ಯ ಕಲ್ಮಂಜೆ, ಯುವ ಉದ್ಯಮಿಗಳಾದ ಸುಧಾಕರ್, ಸಂತೋಷ್ ಕುಮಾರ್, ಲಯನ್ ಲೇಡಿ ಕೌನ್ಸಿಲ್ ಅಧ್ಯಕ್ಷೆ ರೇಣುಕಾ ದಾಮೋದರ್ ಶೆಟ್ಟಿ, ರಂಜನಾ ಶ್ರೀಧರ್ ಶೆಟ್ಟಿ, ಮಮತಾ ದಿವಾಕರ್ ಶೆಟ್ಟಿ ಮತ್ತಿತರರು ಅತಿಥಿಗಳಾಗಿ ಪಾಲ್ಗೊಂಡರು.
ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷ ಸುಧೀರ್ ನಾಯ್ಕ್ ಸ್ವಾಗತಿಸಿದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕೆಸರು ಗದ್ದೆ ಆಟ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.
ನಿರೂಪಣೆ ರೆವಿತ್ ನಾಯ್ಕ್ ಕೊಡಂಗಳ ಕಾರ್ಯಕ್ರಮ ನಿರೂಪಿಸಿ, ಮಧುಕರ್ ನಾಯ್ಕ್ ವಂದಿಸಿದರು.