
Udupi: ಸ್ನೇಹಿತರಿಂದಲೇ ಮನೆಗೆ ನುಗ್ಗಿ ವ್ಯಕ್ತಿಯ ಹತ್ಯೆ; ಮೂವರ ಬಂಧನ
13/08/2025
ಮಾರಕಾಸ್ತ್ರದಿಂದ ಕೊಚ್ಚಿ ವ್ಯಕ್ತಿಯೊಬ್ಬನನ್ನು ಆತನ ಸ್ನೇಹಿತರೇ ಕೊಲೆಗೈದಿರುವ ಘಟನೆ ಉಡುಪಿಯ ಸುಬ್ರಹ್ಮಣ್ಯ ನಗರದ ಲಿಂಗೊಟ್ಟು ಎಂಬಲ್ಲಿ ನಡೆದಿದೆ.
ಸುಬ್ರಹ್ಮಣ್ಯ ನಗರದ ಲಿಂಗೊಟ್ಟು ನಿವಾಸಿ, ಪೈಂಟಿ0ಗ್ ಕೆಲಸ ಮಾಡುತ್ತಿದ್ದ ವಿನಯ್ ದೇವಾಡಿಗ(40) ಕೊಲೆಯಾದವರು. ಈತನ ಸ್ನೇಹಿತರಾದ ಅಕ್ಷೇಂದ್ರ, ಅಜಿತ್ ಹಾಗೂ ಪ್ರದೀಪ್ ಆಚಾರ್ಯ ಕೊಲೆಗೈದಿದ್ದಾರೆ.
ಆಗಸ್ಟ್ 12ರಂದು ರಾತ್ರಿ ವಿನಯ ದೇವಾಡಿಗ ಎಂದಿನ0ತೆ ಊಟ ಮಾಡಿ ಮಲಗಿದ್ದರು. ರಾತ್ರಿ ವೇಳೆ ಮನೆಗೆ ಬಂದ ಆರೋಪಿಗಳು, ಮಲಗಿದ್ದ ವಿನಯ್ ಮೇಲೆ ಮಾರಕಾಸ್ತçಗಳಿಂದ ದಾಳಿ ನಡೆಸಿ ಕೊಲೆಗೈದಿದ್ದಾರೆ. ಘಟನೆಗೆ ಸಂಬ0ಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.