Malpe: ಕಡಲ ತೀರದಲ್ಲಿ ಮೀನುಗಾರರಿಂದ ಸಮುದ್ರ ಪೂಜೆ; ಹಾಲು, ಸಿಯಾಳ ಅರ್ಪಣೆ (Video)
09/08/2025
ಉಡುಪಿಯ ಮಲ್ಪೆ ಕಡಲ ತೀರದಲ್ಲಿ ಮೀನುಗಾರರಿಂದ ಸಮುದ್ರ ಪೂಜೆ ನೆರವೇರಿಸಲಾಯಿತು. ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದ ನಂತರ ಮೆರವಣಿಗೆ ಮೂಲಕ ತೆರಳಲಾಯಿತು. ಬಳಿಕ ಸಮುದ್ರಕ್ಕೆ ಹಾಲು, ಸಿಯಾಳ ಹಾಗೂ ಹೂವುಗಳನ್ನು ಅರ್ಪಿಸಿ, ಪ್ರಾರ್ಥನೆ ಸಲ್ಲಿಸಲಾಯಿತು.
ಎರಡು ತಿಂಗಳ ಮೀನುಗಾರಿಕಾ ನಿಷೇಧದ ಬಳಿಕ ಆಗಸ್ಟ್ನಲ್ಲಿ ಮೀನುಗಾರಿಕಾ ಋತು ಆರಂಭಗೊಂಡಿದೆ. ಹೊಸ ಋತುವಿನ ಮೀನುಗಾರಿಕೆಗೆ ತೆರಳುವ ಮೊದಲ ಮತ್ಸ್ಯ ಸಂಪತ್ತು ವೃದ್ಧಿಗಾಗಿ ಮೀನುಗಾರರು ಸಮುದ್ರ ಪೂಜೆ ನಡೆಸುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಕಡಲಿಗೆ ಇಳಿಯುವ ಮೀನುಗಾರರಿಗೆ ಮತ್ಸ್ಯ ಸಂಪತ್ತು ವೃದ್ಧಿ ಹಾಗೂ ಮೀನುಯಗಾರರಿಗೆ ಯಾವುದೇ ತೊಂದರೆಯಾಗದಿರಲಿ ಎಂದು ಪ್ರತೀ ವರ್ಷ ಸಮುದ್ರ ಪೂಜೆ ನಡೆಸಲಾಗುತ್ತದೆ.
ಅಂತೆಯೇ ಆಗಸ್ಟ್ 9ರಂದು ಮಲ್ಪೆ ಮೀನುಗಾರಿಕಾ ಸಂಘದ ವತಿಯಿಂದ ಸಮುದ್ರ ಪೂಜೆ ನೆರವೇರಿಸಲಾಯಿತು. ಮಲ್ಪೆಯ ವಡಬಾಂಡೇಶ್ವರ ಕಡಲ ತೀರದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸಿದ ಬಳಿಕ, ಸಮುದ್ರಕ್ಕೆ ಹಾಲು, ಸಿಯಾಳ ಹಾಗೂ ಹೂವುಗಳನ್ನು ಅರ್ಪಿಸಲಾಯಿತು. ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸೇರಿದಂತೆ ಮೀನುಗಾರ ಮುಖಂಡರು ಭಾಗವಹಿಸಿದ್ದರು.