
Mangalore: ಯುವತಿ ನಾಪತ್ತೆ; ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
09/08/2025
ಮಂಗಳೂರಿನ ಹೊಯ್ಗೆ ಬಜಾರ್ ಲೂಕ್ಯೆ ಹೌಸ್ ಪಾಲ್ಗಣಿ ನಿವಾಸಿ ಯುವತಿಯೊಬ್ಬಳು ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಿನಾ ಬಾನು (23) ನಾಪತ್ತೆಯಾದ ಯುವತಿ. ಈಕೆ ಸ್ನೇಹಿತೆಯರೊಂದಿಗೆ ಮಂಗಳೂರು ಪೇಟೆಗೆ ಹೋಗಿ ಬರುವುದಾಗಿ ತೆರಳಿದವರು ಬಳಿಕ ಮನೆಗೂ ಬಾರದೇ ಸ್ನೇಹಿತೆಯರೊಂದಿಗೂ ತೆರಳದೇ ನಾಪತ್ತೆಯಾಗಿದ್ದಾರೆ. ಯುವತಿಯ ಮಾಹಿತಿ ದೊರೆತಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ತಿಳಿಸಲಾಗಿದೆ.