
Dharmasthala: ಯೂಟ್ಯೂಬರ್‌ಗಳ ಮೇಲೆ ಹಲ್ಲೆ ಪ್ರಕರಣ; ಒರ್ವ ಆರೋಪಿಯ ಬಂಧನ
08/08/2025
ಧರ್ಮಸ್ಥಳದ ಪಾಂಗಾಳ ಕ್ರಾಸ್‌ನಲ್ಲಿ ಯೂಟ್ಯೂಬರ್‌ಗಳ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬ0ಧಿಸಿ ಓರ್ವ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಕನ್ಯಾಡಿ ನಿವಾಸಿ, ಜೀಪು ಚಾಲಕ ಸೋಮನಾಥ ಸಫಲ್ಯ(48) ಬಂಧಿತ ಆರೋಪಿ.
ಆಗಸ್ಟ್ 6ರಂದು ಸಂಜೆ ವೇಳೆ ನಾಲ್ಕು ಮಂದಿ ಯೂಟ್ಯೂಬರ್‌ಗಳ ಮೇಲೆ ಗುಂಪೊ0ದು ಏಕಾಏಕಿ ಹಲ್ಲೆ ನಡೆಸಿತ್ತು. ಅಲ್ಲದೇ ಕ್ಯಾಮರಾಗಳಿಗೆ ಹಾನಿ ಮಾಡಿ, ಜೀವ ಬೆದರಿಕೆಯೊಡ್ಡಿತ್ತು. ಈ ಬಗ್ಗೆ 15ರಿಂದ 50 ಮಂದಿಯ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬ0ಧಿಸಿದ0ತೆ ಆರೋಪಿಗಳನ್ನು ಗುರುತಿಸಿದ ಪೊಲೀಸರು ಸೋಮನಾಥ ಸಫಲ್ಯನನ್ನು ಬಂಧಿಸಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಸಮಥ್ ಗಾಣಿಗೇರಾ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ ಎಂದು ತಿಳಿದು ಬಂದಿದೆ.