
Hebri: ಸೀತಾನದಿ ಫಾರ್ಮ್ ಹೌಸ್ ಮಾಲಕ ರಮೇಶ್ ಹೆಗ್ಡೆ ಹೃದಯಾಘಾತದಿಂದ ನಿಧನ
Thursday, September 25, 2025
ಕಾಂಗ್ರೆಸ್ ಪಕ್ಷದ ಮುಖಂಡ, ಸೀತಾನದಿ ಫಾರ್ಮ್ ಹೌಸ್ ಮಾಲಕ ರಮೇಶ್ ಹೆಗ್ಡೆ(58) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ ಸೀತಾನದಿ ವಾಸುದೇವ ಹೆಗ್ಡೆ ಇವರ ಪುತ್ರ ರಮೇಶ್ ಹೆಗ್ಡೆ, ಸೆ.24ರ ಮಧ್ಯಾಹ್ನ ತಮ್ಮ ಸೀತಾನದಿಯ ಫಾರ್ಮ್ ಹೌಸ್ ನಲ್ಲಿ ನಿಧನರಾಗಿದ್ದಾರೆ. ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ರಮೇಶ್ ಹೆಗ್ಡೆ ಅಪಾರ ಸ್ನೇಹಿತ ಬಳಗವನ್ನೇ ಹೊಂದಿದ್ದರು. ರಮೇಶ್ ಹೆಗ್ಡೆ ಅವರು ಪತ್ನಿ, ಪುತ್ರ ಹಾಗೂ ಅಪಾರ ಕುಟುಂಬ ಬಳಗವನ್ನು ಅಗಲಿದ್ದಾರೆ. ರಮೇಶ್ ಹೆಗ್ಡೆ ಅವರ ಅಕಾಲಿಕ ಅಗಲಿಕೆಗೆ ಅವರ ಅಪಾರ ಸ್ನೇಹಿತ ಬಳಗ ಕಂಬನಿ ಮಿಡಿದಿದೆ.