-(13)_medium.webp)
Mudbidre: ಒಂಟಿಕಟ್ಟೆಯ ಕುದಿ ಕಂಬಳಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಚಾಲನೆ
Wednesday, September 24, 2025
ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಮೂಡಬಿದ್ರೆ ಇದರ ಆಶ್ರಯದಲ್ಲಿ ನಡೆಯುವ 23ನೇ ವರ್ಷದ ಕಂಬಳಕ್ಕೆ ಪೂರಕವಾಗಿ ನಡೆಯುವ ಕುದಿ ಕಂಬಳಕ್ಕೆ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಚಾಲನೆ ನೀಡಿದರು.
ಮಿಜಾರು ಹರಿ ಮೀನಾಕ್ಷಿ ತೋಟದ ಹರಿಯಪ್ಪ ಶೆಟ್ಟಿ ಕರೆಗೆ ತೆಂಗಿನಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು. ಪುರಸಭಾ ಉಪಾಧ್ಯಕ್ಷ ನಾಗರಾಜ ಪೂಜಾರಿ, ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಕಂಬಳ ಸಮಿತಿ ಪ್ರಮುಖರಾದ ರಂಜಿತ್ ಪೂಜಾರಿ, ಭಾಸ್ಕರ್ ಎಸ್ ಕೋಟ್ಯಾನ್, ಸುರೇಶ್ ಪೂಜಾರಿ, ಕಂಬಳ ಕೋಣಗಳ ಯಜಮಾನ ಸತೀಶ್ಚಂದ್ರ ಪಾಣಿಲ ಇರುವೈಲು, ದಿನೇಶ್ ಪೂಜಾರಿ ಮೊದಲಾದವರು ಇದ್ದರು.