-->
Karkala: ಮಾರಕಾಸ್ತ್ರ ತೋರಿಸಿ, ಬೆದರಿಕೆಯೊಡ್ಡಿ ಹಟ್ಟಿಯಿಂದ ಜಾನುವಾರು ಕಳ್ಳತನ

Karkala: ಮಾರಕಾಸ್ತ್ರ ತೋರಿಸಿ, ಬೆದರಿಕೆಯೊಡ್ಡಿ ಹಟ್ಟಿಯಿಂದ ಜಾನುವಾರು ಕಳ್ಳತನ


ಮಾರಕಾಸ್ತ್ರ ತೋರಿಸಿ ಬೆದರಿಸಿ ಹಟ್ಟಿಯಿಂದ ಮೂರು ದನಗಳನ್ನು ಕಳ್ಳತನ ಮಾಡಿದ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲಿನಲ್ಲಿ ಸೆ.28ರ ತಡರಾತ್ರಿ ನಡೆದಿದೆ.

ಶಿರ್ಲಾಲಿನ ಜಯಶ್ರೀ ಎಂಬ ಮಹಿಳೆಯ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯ ಹಟ್ಟಿಗೆ ನುಗ್ಗಿದ ದುಷ್ಕರ್ಮಿಗಳು ಮೂರು ದನಗಳನ್ನು ಕದ್ದೊಯ್ದಿದ್ದಾರೆ.ರಾತ್ರಿ ಮಹಿಳೆಯು ಮನೆಯಲ್ಲಿ ಒಂಟಿಯಾಗಿದ್ದಾಗ ವಾಹನವೊಂದರಲ್ಲಿ ದನಗಳ್ಳರು ಬಂದಿದ್ದು, ಈ ವೇಳೆ ಶಬ್ದಕ್ಕೆ ಎಚ್ಚೆತ್ತ ಮಹಿಳೆ ಹೊರಗೆ ಬಂದಾಗ ಮಾರಕಾಸ್ತ್ರಗಳನ್ನು ತೋರಿಸಿ ಆಕೆಯನ್ನು ಬೆದರಿಸಿ ದನಗಳನ್ನು ಕೊಂಡೊಯ್ದಿದ್ದಾರೆ. 

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article