ಬ್ರೇಕ್ ವೈಫಲ್ಯಗೊಂಡು ಲಾರಿಯೊಂದು ಮಗುಚಿ ಬಿದ್ದ ಘಟನೆ ಕೊಲ್ಲೂರು ಸಮೀಪದ ಜಡ್ಕಲ್ ಸಮೀಪ ನಡೆದಿದೆ. ಕೊಲ್ಲೂರು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿ ಹಿಮ್ಮುಖವಾಗಿ ಚಲಿಸಿದೆ. ನೋಡ ನೋಡುತ್ತಿದ್ದಂತೆ ಸಮೀಪದ ಚರಂಡಿಗೆ ಉರುಳಿ ಬಿದ್ದಿದೆ. ಮೇಲ್ನೋಟಕ್ಕೆ ಬ್ರೇಕ್ ವೈಫಲ್ಯದಿಂದ ಲಾರಿ ಪಲ್ಟಿಯಾಗಿರಬಹುದೆಂದು ಹೇಳಲಾಗುತ್ತಿದೆ.