
Mangalore: ಕಾಪಿಕಾಡುವಿನ ಯುವತಿ ನಾಪತ್ತೆ; ಬಜ್ಪೆ ಠಾಣೆಯಲ್ಲಿ ದೂರು ದಾಖಲು
Friday, September 26, 2025
ಮಂಗಳೂರಿನ ಜೋಕಟ್ಟೆ ಕೆಂಜಾರು ಗ್ರಾಮದ ಕಾಪಿಕಾಡು ಗುಡ್ಡೆ ಮನೆಯ ಯುವತಿಯೊಬ್ಬಳು ನಾಪತ್ತೆಯಾಗಿರುವ ಬಗ್ಗೆ ಬಜಪೆ ಠಾಣೆಗೆ ದೂರು ನೀಡಲಾಗಿದೆ.
ಕೆಂಜಾರು ಗ್ರಾಮದ ಕಾಪಿಕಾಡು ಗುಡ್ಡೆ ಮನೆಯ ನಿವಾಸಿ ಟೀನಾ (23) ನಾತ್ತೆಯಾಗಿರುವ ಯುವತಿ. ಈಕೆ ಯಾರೂ ಇಲ್ಲದ ವೇಳೆ ಮನೆಯಿಂದ ಹೊರಟು ಹೋಗಿದ್ದು, ಬಳಿಕ ಮನೆಗೆ ವಾಪಾಸಾಗದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟೀನಾ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತರೆ ತಕ್ಷಣ ಬಜಪೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಠಾಣಾಧಿಕಾರಿ ತಿಳಿಸಿದ್ದಾರೆ.