
Kasaragodu: ಕಾರಿಗೆ ಟಿಪ್ಪರ್ ಡಿಕ್ಕಿ; ಪೊಲೀಸ್ ಸಿಬ್ಬಂದಿ ಮೃತ್ಯು; ಅಧಿಕಾರಿಗೆ ಗಾಯ
Friday, September 26, 2025
ಕಾರಿಗೆ ಟಿಪ್ಪರ್ ಢಿಕ್ಕಿ ಹೊಡೆದು ಪೊಲೀಸ್ ಸಿಬ್ಬಂದಿಯೊಬ್ಬರು ಮೃತಪಟ್ಟ ಘಟನೆ ಕಾಸರಗೋಡುವಿನ ಹೊರವಲಯದ ಚೆಂಗಳ ನಾಲ್ಕನೇ ಮೈಲ್ ಬಳಿ ಸೆ. 26ರ ಮುಂಜಾನೆ ಸಂಭವಿಸಿದೆ.
ಚೆರ್ವತ್ತೂರು ಮಾಯಿಚ್ಚಿ ನಿವಾಸಿ, ಬೇಕಲ ಡಿವೈಎಸ್ಪಿ ದಳದ ಕಾನ್ ಸ್ಟೇಬಲ್ ಸಜೀಶ್(38) ಮೃತಪಟ್ಟವರು. ಮುಂಜಾನೆ 2:45ರ ವೇಳೆಗೆ ಸಜೀಶ್ ಪ್ರಯಾಣಿಸುತ್ತಿದ್ದ ಆಲ್ಟೊ ಕಾರು ಹಾಗೂ ಟಿಪ್ಪರ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಸಜೀಶ್ ಅವರನ್ನು ಸಮೀಪದ ಚೆಂಗಳದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವಚರು ಮೃತಪಟ್ಟಿದ್ದಾರೆ. ಅವರ ಜೊತೆಗಿದ್ದ ಪೊಲೀಸ್ ಅಧಿಕಾರಿ ಸುಭಾಶ್ಚಂದ್ರನ್ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಕಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾದಕ ದ್ರವ್ಯ ಮಾರಾಟ ಸಂಬAಧ ಲಭಿಸಿದ ಮಾಹಿತಿಯ ಜಾಡು ಹಿಡಿದು ಪೊಲೀಸ್ ವಾಹನ ಬಿಟ್ಟು ಖಾಸಗಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.