
Mangalore: ರುದ್ರ ತಾಂಡವಂ ರಾಜ್ಯಮಟ್ಟದ ಭಕ್ತಿ ನೃತ್ಯ ಸ್ಪರ್ಧೆ; ಟೀಮ್ ಕ್ಲ್ಯಾನ್ ಮಂಗಳೂರು ಪ್ರಥಮ
Friday, September 26, 2025
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ ಮಹೋತ್ಸವದ ಅಂಗವಾಗಿ ಪಿಲಿಪಂಜ ಚಲನಚಿತ್ರ ನಿರ್ಮಾಪಕ ಪ್ರತಿಕ್ ಪೂಜಾರಿ ಪ್ರಾಯೋಜಕತ್ವದಲ್ಲಿ ‘ರುದ್ರತಾಂಡವಂ’ ರಾಜ್ಯಮಟ್ಟದ ಭಕ್ತಿ ನೃತ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಟೀಮ್ ಕ್ಲ್ಯಾನ್ ಮಂಗಳೂರು (ಪ್ರಥಮ), ನಾಟ್ಯ ಸ್ಕೂಲ್ ಆಫ್ ಡ್ಯಾನ್ಸ್ ಕುಂದಾಪುರ (ದ್ವಿತೀಯ), ಎಕ್ಸ್ಟ್ರೀಮ್ ಡ್ಯಾನ್ಸ್ ಕ್ರೀವ್ ಉಡುಪಿ (ತೃತೀಯ) ಸ್ಥಾನ ಪಡೆದರು.
ಟೀಮ್ ಸುಧೀರ್ ಉಲ್ಲಾಲ್ ಡ್ಯಾನ್ಸ್ ಕ್ರೀವ್, ವಿ ಕ್ರೀವ್ ಮಂಗಳೂರು, ಗೋಕರ್ಣನಾಥೇಶ್ವರ ಡಿಗ್ರಿ ಕಾಲೇಜು ಮಂಗಳೂರು ತಂಡ ಆಕರ್ಷಕ ಬಹುಮಾನ ಪಡೆದರು.
ಬಹುಮಾನ ವಿತರಣೆ ಸಮಾರಂಭದಲ್ಲಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಅಭಿವೃದ್ಧಿ ಸಮಿತಿ ಸದಸ್ಯರಾದ ಹರಿಕೃಷ್ಣ ಬಂಟ್ವಾಳ, ಲೀಲಾಕ್ಷ ಕರ್ಕೇರಾ, ನಿರ್ಮಾಪಕ ಪ್ರತೀಕ್ ಪೂಜಾರಿ, ಯೋಗೀಶ್ ಕೋಟ್ಯಾನ್, ಗೆಜ್ಜೆಗಿರಿ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಕದ್ರಿ ಮಂಜುನಾಥ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಜೇಂದ್ರ ಚಿಲಿಂಬಿ ಮೊದಲಾದವರಿದ್ದರು.