
New Delhi: ಲೈಂಗಿಕ ಕಿರುಕುಳ ಆರೋಪಿ ದೇವಮಾನವ ಚೈತನ್ಯಾನಂದ ಸರಸ್ವತಿ ಸೆರೆ
Sunday, September 28, 2025
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ದೆಹಲಿಯ ಪ್ರತಿಷ್ಠಿತ ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್ ನಿರ್ದೇಶಕನಾಗಿದ್ದ ಸ್ವಯಂ ಘೋಷಿತ ದೇವಮಾನವ ಚೈತನ್ಯಾನಂದ ಸರಸ್ವತಿಯನ್ನು ಪೊಲೀಸರು ಆಗ್ರಾದಲ್ಲಿ ಬಂಧಿಸಿದ್ದಾರೆ.
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಹಾಗೂ ಆರ್ಥಿಕ ಅಪರಾಧ ಎಸಗಿರುವ ಆರೋಪ ಕೇಳಿಬರುತ್ತಿದ್ದಂತೆ ಚೈತನ್ಯಾನಂದ ಸರಸ್ವತಿ ತಲೆಮರೆಸಿಕೊಂಡಿದ್ದರು.
ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಅಸಭ್ಯ ಮೆಸೇಜ್ ಕಳಿಸುವುದು, ಒತ್ತಾಯದ ಲೈಂಗಿಕ ಸಂಪರ್ಕ, ದೂರು ನೀಡದಂತೆ ತಡೆಯಲು ಮೊಬೈಲ್ ವಶಪಡಿಸಿಕೊಳ್ಳುವುದು ಇತ್ಯಾದಿ ಲೈಂಗಿಕ ಅಪರಾಧದ ಆರೋಪ ಅವರ ಮೇಲಿದೆ.