-->
 Shimoga: ಸಂಭ್ರಮದ ಶಿವಮೊಗ್ಗ ದಸರಾ; ತಾಲೀಮು ಆರಂಭಿಸಿದ ಗಜಪಡೆ

Shimoga: ಸಂಭ್ರಮದ ಶಿವಮೊಗ್ಗ ದಸರಾ; ತಾಲೀಮು ಆರಂಭಿಸಿದ ಗಜಪಡೆ


ಶಿವಮೊಗ್ಗ ನಗರದಲ್ಲಿ ಸಂಭ್ರಮದ ದಸರಾ ಆಚರಣೆ ನಡೆಯುತ್ತಿದ್ದು, ಜಂಬೂಸವಾರಿಯಲ್ಲಿ ಭಾಗವಹಿಸಲು ಸಕ್ರೆಬೈಲಿನಿಂದ ಗಜಪಡೆ ಆಗಮಿಸಿದೆ.

ಮೂರು ಆನೆಗಳು ಶಿವಮೊಗ್ಗಕ್ಕೆ ಆಗಮಿಸಿದ್ದು, ಗಜಪಡೆಗೆ ಶಾಸಕ ಎಸ್.ಎನ್ ಚನ್ನಬಸಪ್ಪ ಹಾಗೂ ಆಯುಕ್ತ ಮಾಯಣ್ಣಗೌಡ ಆರತಿ ಎತ್ತಿ ಸ್ವಾಗತ ಕೋರಿದ್ದಾರೆ. ನಗರದ ವಾಸವಿ ಶಾಲೆ ಆವರಣದಲ್ಲಿ ಆನೆಗಳಿಗೆ ತಂಗಲು ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗ ನಗರದಲ್ಲಿ ಗಜಪಡೆ ತಾಲೀಮು ಆರಂಭಿಸಿವೆ. ದಸರಾದ ಕೊನೆಯ ದಿನ ಅದ್ದೂರಿ ಜಂಬೂಸವಾರಿ ನಡೆಯಲಿದೆ. ಈ ಭಾರಿಯೂ ಸಾಗರ್ ಆನೆ ಅಂಬಾರಿ ಹೊರಲಿದೆ. ಸಾಗರ್‌ಗೆ ಬಾಲಣ್ಣ ಮತ್ತು ಬಹದ್ದೂರ್ ಆನೆಗಳು ಸಾಥ್ ನೀಡಲಿವೆ. 650 ಕೆಜಿ ಬೆಳ್ಳಿಯ ಅಂಬಾರಿಯಲ್ಲಿ ನಾಡದೇವಿ ಚಾಮುಂಡಿಯನ್ನು ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ. ರಾಜ್ಯದಲ್ಲಿ ಎರಡನೇ ಅತಿದೊಡ್ಡ ದಸರಾ ಎಂಬ ಖ್ಯಾತಿ ಶಿವಮೊಗ್ಗ ದಸರಾಕ್ಕೆ ಇದೆ. ಈ ಭಾರಿ ದಸರಾ ಜಂಬೂ ಸವಾರಿ ನೋಡಲು ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ಮಹಾನಗರ ಪಾಲಿಕೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article