-->
Bangalore: ಮೈಸೂರಿನಲ್ಲೇ ಎಸ್.ಎಲ್ ಭೈರಪ್ಪ ಸ್ಮಾರಕ: ಸಿಎಂ ಘೋಷಣೆ

Bangalore: ಮೈಸೂರಿನಲ್ಲೇ ಎಸ್.ಎಲ್ ಭೈರಪ್ಪ ಸ್ಮಾರಕ: ಸಿಎಂ ಘೋಷಣೆ


ಅಕ್ಷರ ಮಾಂತ್ರಿಕ ಎಸ್.ಎಲ್ ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲೇ ನಿರ್ಮಾಣ ಮಾಡಲು ಸರ್ಕಾರ ಎಲ್ಲ ಕ್ರಮ ಕೈಗೊಳ್ಳುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. 


ರವೀಂದ್ರ ಕಲಾಮಂದಿರದಲ್ಲಿ ಎಸ್.ಎಸ್ ಭೈರಪ್ಪ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಬಜೆಪಿಯವರು ಹೇಳಿದ್ರು ಎಂದು ಭೈರಪ್ಪ ಅವರ ಸ್ಮಾರಕ ಮಾಡಲ್ಲ. ಮೈಸೂರನಲ್ಲೇ ಸ್ಮಾರಕ ಮಾಡಲು ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಭೈರಪ್ಪ ಅವರು ಬಹುಕಾಲ ಮೈಸೂರಿನಲ್ಲೇ ಕಾಲ ಕಳೆದಿದ್ದರಿಂದ ಅಲ್ಲೇ ಸ್ಮಾರಕ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಭೈರಪ್ಪ ಅವ್ರು ಒಂದು ಪುಟ್ಟ ಹಳ್ಳಿಯಲ್ಲಿ ಹುಟ್ಟಿ, ಕಷ್ಟಪಟ್ಟು ಮೇಲೆ ಬಂದು, ಸಾಹಿತ್ಯ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದವರು. ಭೋದನೆ ಮಾಡುತ್ತಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಸಾಮಾನ್ಯವಾಗಿ ಎರಡೂ ಕೆಲಸ ಮಾಡುವುದು ಕಷ್ಟ. ಭೋದನೆ ಮಾಡುತ್ತಿದ್ರೂ, ಅವರಿಗೆ ಸಾಹಿತ್ಯದ ಮೇಲೆ ಹೆಚ್ಚು ಆಸಕ್ತಿಯಿತ್ತು. ಅವರ ನಿಧನದಿಂದ ಇಂದು ಸಾರಸ್ವತ ಲೋಕ ಬಡವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. 


ಭೈರಪ್ಪನವರು ಸುಮಾರು 25 ಕಾದಂಬರಿಗಳನ್ನು ಬರೆದಿದ್ದಾರೆ. ಅವರು ಮೈಸೂರಿನಲ್ಲೇ ಹೆಚ್ಚು ಕಾಲ ಇದ್ದರು. ಹೈಸ್ಕೂಲ್‌ನಿಂದ ಎಂಎ ವರೆಗಿನ ವಿದ್ಯಾಭ್ಯಾಸವನ್ನ ಮೈಸೂರಿನಲ್ಲೇ ಮಾಡಿದ್ದರು. ಮೈಸೂರು ಅವರ ಕರ್ಮಸ್ಥಳವಾಗಿದೆ. ಅವರ ಕಾದಂಬರಿಗಳು 40 ಭಾಷೆಗಳಿಗೆ ಭಾಷಾಂತರವಾಗಿದೆ. ಬಹುಷಃ ಇಷ್ಟು ಬರಹಳಿಗೆ ಭಾಷಾಂತರವಾಗಿದ್ದು ಅವರೊಬ್ಬರದ್ದೇ ಅನಿಸುತ್ತೆ. ತಮ್ಮ ಬರಹಗಳಿಂದ ಕನ್ನಡ ಹಾಗೂ ಬೇರೆ ಬೇರೆ ಭಾಷೆಗಳಲ್ಲಿ ಅಪಾರ ಅಭಿಮಾನಿಗಳನ್ನ ಸಂಪಾದಿಸಿದ್ದರು ಎಂದು ತಿಳಿಸಿದ್ದಾರೆ.

 ಪದ್ಮಭೂಷಣ, ಸರಸ್ವತಿ ಸಮ್ಮಾನ್ ಸೇರಿದಂತೆ ಅನೇಕ ಪ್ರಶಸ್ತಿಗೆ ಲಭಿಸಿದ್ದವು. ಅವರ ಈ ಎಲ್ಲಾ ಪ್ರಶಸ್ತಿಗೆ ಅವ್ರು ಅರ್ಹರಾಗಿದ್ದರು. ನನ್ನ ಪ್ರಕಾರ ಅವರಿಗೆ ಜ್ಞಾನಪೀಠ ಪ್ರಶಸ್ತಿಗೆ ಸಿಗಬೇಕಿತ್ತು. ಆದ್ರೆ ಯಾವ ಪ್ರಶಸ್ತಿಗೂ ಅವ್ರು ಆಸೆಪಟ್ಟವರಲ್ಲ. ಕಾದಂಬರಿ ಬರೆಯೋದು ನನ್ನ ಆತ್ಮ ತೃಪ್ತಿಗೆ ಎಂದು ಹೇಳುತ್ತಿದ್ದರು. ಜಗತ್ಪçಸಿದ್ಧ ಕಾದಂಬರಿಗಳನ್ನೇ ಬರೆದಿದ್ದಾರೆ, ನನಗೆ ಅವರ ಎಲ್ಲಾ ಕಾದಂಬರಿಗಳನ್ನು ಓದೋಕೆ ಆಗಿಲ್ಲ. ಕೆಲವು ಕಾದಂಬರಿಗಳನ್ನಷ್ಟೇ ಓದಿದ್ದೇನೆ ಎಂದು ತಿಳಿಸಿದ್ದಾರೆ.ಭೈರಪ್ಪನವರಿಗೆ ಚಿರಶಾಂತಿ ಕೋರುತ್ತ, ಕುಟುಂಬಸ್ಥರಿಗೆ ಹಾಗೂ ಅವರ ಅಭಿಮಾನಿಗಳಿಗೆ ಭೈರಪ್ಪ ಅವರ ಅಗಲಿಕೆಯ ದುಃಖ ಬರಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.

Ads on article

Advertise in articles 1

advertising articles 2

Advertise under the article