-->
Sullia: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ; ಮೂವರಿಗೆ ಗಾಯ, ಆಸ್ಪತ್ರೆಗೆ ದಾಖಲು

Sullia: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ; ಮೂವರಿಗೆ ಗಾಯ, ಆಸ್ಪತ್ರೆಗೆ ದಾಖಲು


ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಗಾಯಗೊಂಡ ಘಟನೆ ಮಾಣಿ-ಮೈಸೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕನಕಮಜಲು ಸಮೀಪದ ಪಂಜಿಗುಂಡಿ ಬಳಿ ನಡೆದಿದೆ.

ಸುಳ್ಯದಿಂದ ಮಂಗಳೂರು ಕಡೆ ಹೋಗುತ್ತಿದ್ದ ಬಲೇನೋ ಕಾರು ಹಾಗೂ ಪುತ್ತೂರಿನಿಂದ ಗುತ್ತಿಗಾರು ಕಡೆಗೆ ಬರುತ್ತಿದ್ದ ಆಲ್ಟೊ ಕಾರು ನಡುವೆ ಈ ಅಪಘಾತ ಸಂಭವಿಸಿದೆ. ಘಟನೆಯಿಂದ ಎರಡು ಕಾರುಗಳು ಜಖಂ ಗೊಂಡಿದ್ದು ಬಲೇನೋ ಕಾರು ಚಾಲಕ ಹಾಗೂ ಆಲ್ಟೊಕಾರಿನಲ್ಲಿದ್ದ ಗುತ್ತಿಗಾರಿನ ಮೂವರಿಗೂ ಗಾಯವಾಗಿದ್ದು ಅವರೆಲ್ಲರನ್ನೂ ಸುಳ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

Ads on article

Advertise in articles 1

advertising articles 2

Advertise under the article