-->
Udupi: ಉಚ್ಚಿಲ ದಸರಾ ಹಿನ್ನೆಲೆ; ಅ. 2ರಂದು ವಾಹನ ಸಂಚಾರದಲ್ಲಿ ಬದಲಾವಣೆ

Udupi: ಉಚ್ಚಿಲ ದಸರಾ ಹಿನ್ನೆಲೆ; ಅ. 2ರಂದು ವಾಹನ ಸಂಚಾರದಲ್ಲಿ ಬದಲಾವಣೆ


ಉಡುಪಿ ಯ ಉಚ್ಚಿಲ ದಸರಾ 2025 ಪ್ರಯುಕ್ತ ಅ. 2ರಂದು ಬೃಹತ್‌ ಶೋಭಾಯತ್ರೆ ಮೆರವಣಿಗೆಯು ರಾಷ್ಟ್ರೀಯ ಹೆದ್ದಾರಿ -66 ರಲ್ಲಿ ಸಾಗಲಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿಯಂತ್ರಿಸುವ ನಿಟ್ಟಿನಲ್ಲಿ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ. 

ಉಡುಪಿ-ಮಂಗಳೂರು ಮಾರ್ಗವಾಗಿ ಬರುವ ಘನ ವಾಹನಗಳನ್ನು ಅ.2ರಂದು ಸಂಜೆ 5:00 ಗಂಟೆಯಿಂದ ರಾತ್ರಿ 9:00 ಗಂಟೆವರೆಗೆ ಬದಲಿ ಮಾರ್ಗವಾಗಿ ಕಟಪಾಡಿ-ಶಿರ್ವ-ಬೆಳ್ಮಣ್‌-ಪಡುಬಿದ್ರಿ ಮಾರ್ಗವಾಗಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ.

ಉಡುಪಿ ಕಡೆಯಿಂದ ಬಜ್ಪೆ ಏರ್‌ಪೋರ್ಟ್‌ ಹೋಗುವ ವಾಹನಗಳು ಕಟಪಾಡಿ-ಶಿರ್ವ-ಬೆಳ್ಮಣ್‌-ಮುಂಡ್ಕೂರು ಮಾರ್ಗವಾಗಿ ಸಂಚರಿಸುವುದು. ಹಾಗೂ ಟ್ರಕ್‌, ಲಾರಿ, ಟ್ಯಾಂಕರ್‌ ಮುಂತಾದ ಘನ ವಾಹನಗಳನ್ನು ರಾತ್ರಿ 9:00 ಗಂಟೆಯವರೆಗೆ ಕುಂದಾಪುರ, ಉಡುಪಿ ಕಡೆಗಳಲ್ಲಿ ಟ್ರಕ್‌ಬೇಯಲ್ಲಿ ನಿಲ್ಲಿಸಿ ನಂತರ ಸಂಚಾರ ಮುಂದುವರಿಸುವಂತೆ ಸೂಚಿಸಲಾಗಿದೆ. 

ಉಡುಪಿ ಯಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರು ಸಂಚರಿಸುವ ರಾತ್ರಿ ಪ್ರಯಾಣಿಕ ಬಸ್ಸುಗಳು ರಾತ್ರಿ 9:00 ಗಂಟೆ ನಂತರ ಉಡುಪಿ ಯಿಂದ ಸಂಚರಿಸಬಹುದಾಗಿದೆ. ಮಂಗಳೂರು-ಉಡುಪಿ ಮಾರ್ಗವಾಗಿ ಸಾಗುವ ಘನ ವಾಹನಗಳು ಸಂಜೆ 5:00 ರಿಂದ ರಾತ್ರಿ 10:00 ಗಂಟೆ ಮಧ್ಯೆ ಸಂಚರಿಸಬಾರದಾಗಿ ಸೂಚಿಸಲಾಗಿದೆ.

Ads on article

Advertise in articles 1

advertising articles 2

Advertise under the article