
Udupi : ಹಾವಂಜೆಯಲ್ಲಿ ಮದರಸ ನಿರ್ಮಾಣಕ್ಕೆ ಅನುಮತಿ ; ಪಿಡಿಓ ಕಾರ್ಯವೈಖರಿಗೆ ಹಿಂದೂ ಸಂಘಟನೆಗಳ ಆಕ್ಷೇಪ
ಹಾವಂಜೆ ಪಂಚಾಯತ್ ವ್ಯಾಪ್ತಿಯಲ್ಲಿ ಮದರಸಕ್ಕೆ ಅನುಮತಿ ನೀಡಿದ ವಿಚಾರವಾಗಿ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.ಬ್ರಹ್ಮಾವರ ತಾಲೂಕಿನ ಹಾವಂಜೆ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯವೊಂದನ್ನು ಕೈಗೊಳ್ಳಲಾಗಿತ್ತು.ಆದರೆ ಆ ನಿರ್ಣಯವನ್ನು ಪಿಡಿಒ, ಕಾರ್ಯದರ್ಶಿ ಧಿಕ್ಕರಿಸಿ ಮದರಸಾಕ್ಕೆ ಅನುಮತಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಗ್ರಾಮ ಪಂಚಾಯತ್ ಅಧಿಕಾರಿಗಳ ಕಾರ್ಯವೈಖರಿಗೆ ಶಾಸಕ ಯಶ್ ಪಾಲ್ ಸುವರ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಇದೇವೇಳೆ ಪಂಚಾಯತ್ ಮುಂದೆ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾವಣೆಗೊಂಡು ಪರವಾನಿಗೆ ರದ್ದುಪಡಿಸದಿದ್ದರೆ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ,ಕಾನೂನು ಮೀರಿ ಹೈಕೋರ್ಟ್ ಸುತ್ತೋಲೆಯನ್ನು ಪಿಡಿಒಗಳು ಧಿಕ್ಕರಿಸಿದ್ದಾರೆ.ಹಿಂದಿನ ಪಿಡಿಒ ಮತ್ತು ಹೊಸ ಪಿಡಿಒ ತರಾತುರಿಯಲ್ಲಿ ಮದರಸಾಕ್ಕೆ ಪರವಾನಿಗೆ ಕೊಟ್ಟಿದಾರೆ. ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ಪರವಾನಿಗೆ ನೀಡಬಾರದು ಎಂದು ನಿರ್ಣಯಿಸಲಾಗಿತ್ತು.ಆದರೆ ಪಂಚಾಯತ್ ರಾಜ್ ಕಾನೂನಿಗೆ ವಿರುದ್ಧವಾಗಿ ಅಧಿಕಾರಿಗಳು ನಡೆದುಕೊಂಡಿದ್ದಾರೆ. ಜಿಲ್ಲಾಧಿಕಾರಿಗಳ ಗಮನಕ್ಕೆ ಈ ವಿಚಾರವನ್ನು ತರಲಾಗಿದೆ.ಅಧಿಕಾರಿಗಳ ಮೂಲಕ ಇಸ್ಲಾಮೀಕರಣ ಜಾರಿಗೆ ತರಲು ಹೊರಟಿದ್ದಾರೆ. ಮುಸಲ್ಮಾನರ ಒಂಭತ್ತು ಮನೆಗಳಿಗೆ ಮದರಸಾದ ಅಗತ್ಯ ಇಲ್ಲ. ನಕಲಿ ದಾಖಲೆ ಸೃಷ್ಟಿಸಿ ರಸ್ತೆಯಿಂದ 10 ಮೀಟರ್ ದೂರದಲ್ಲಿದೆ ಎಂದು ತೋರಿಸಲಾಗಿದೆ. ಕಾಂಗ್ರೆಸ್ ನ ಏಜೆಂಟರಂತೆ ಇಲಾಖೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ತಕ್ಷಣ ಅನುಮತಿ ಹಿಂಪಡೆಯಬೇಕು ಎಂದು