Udupi: ನಾಪತ್ತೆಯಾಗಿದ್ದ ಹರಿಯಾಣ ಮೂಲದ ಯುವಕ ತ್ರಾಸಿಯಲ್ಲಿ ಪತ್ತೆ
Monday, September 29, 2025
ಹರಿಯಾಣದ ಯಮನಾ ನಗರದಿಂದ ನಾಪತ್ತೆಯಾಗಿದ್ದ ಯುವಕನೊಬ್ಬನನ್ನು ಉಡುಪಿಯ ಗಂಗೊಳ್ಳಿ ಠಾಣಾ ಪೊಲೀಸರು ತ್ರಾಸಿ ಬಳಿ ಪತ್ತೆ ಹಚ್ಚಿದ್ದಾರೆ.
ಹರಿಯಾಣ ಮೂಲದ ಶಿವಮ್ ಎಂಬ ಯುವಕ ಮನೆಯಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ಹರಿಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಯುವಕ ಶಿವಮ್ ರೈಲಿನಲ್ಲಿ ಉಡುಪಿಗೆ ಬಂದಿದ್ದು, ಮಾಹಿತಿ ಪಡೆದ ಗಂಗೊಳ್ಳಿ ಠಾಣಾ ಪೊಲೀಸರು ಯುವಕನನ್ನು ವಿಚಾರಿಸಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಗಂಗೊಳ್ಳಿ ಠಾಣಾ ಪಿಎಸ್‌ಐ ಪವನ್ ನಾಯ್ಕ್, ಅಪರಾಧ ವಿಭಾಗದ ಪಿಎಸ್‌ಐ ಸುನಿಲ್, ಹೆಡ್ ಕಾನ್ಸ್ಟೇಬಲ್ ಚಂದ್ರ ಹಾಗೂ ಸಿಬ್ಬಂದಿಗಳು ಯುವಕನನ್ನು ಮರಳಿ ಮನೆಗೆ ತಲುಪಿಸುವಲ್ಲಿ ಸಹಕರಿಸಿದರು.