
Ullala: ಮೇಕ್ ಎ ಚೇಂಜ್ ಫೌಂಡೇಶನ್ ವತಿಯಿಂದ ಸ್ವಚ್ಛತಾ ಅಭಿಯಾನ
Wednesday, September 24, 2025
ಮೇಕ್ ಎ ಚೇಂಜ್ ಫೌಂಡೇಶನ್ ಇದರ ಆಶ್ರಯದಲ್ಲಿ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಮೆನೇಜ್ ಮೆಂಟ್, ಎನ್.ಎಸ್. ಎಸ್ , ಜನಪ್ರಿಯ ಆಸ್ಪತ್ರೆ, ಎಂಎಫ್ ಸಿ ಗ್ರೂಫ್ ಆಫ್ ಹೋಟೆಲ್ಸ್ ಹಾಗೂ ಎನ್.ಎಸ್.ಯು.ಐ ಇವುಗಳ ಸಹಯೋಗದಲ್ಲಿ ಸ್ವಚ್ಛತಾ ಅಭಿಯಾನ ಉಳ್ಳಾಲ ಬೀಚ್‌ನಲ್ಲಿ ನಡೆಯಿತು.
ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮೇಕ್ ಎ ಚೇಂಜ್ ಫೌಂಡೇಶನ್ ಸಂಸ್ಥಾಪಕ ಸುಹೈಲ್ ಕಂದಕ್ ಮಾತನಾಡಿ, ಸ್ವಚ್ಛತೆ ಕೇವಲ ಒಂದು ಅಭಿಯಾನವಲ್ಲ, ಇದು ಪ್ರತಿಯೊಬ್ಬರ ಜವಾಬ್ದಾರಿ. ಯುವಕರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ ಎಂದರು.
ಈ ಸ್ವಚ್ಛತಾ ಕಾರ್ಯದಲ್ಲಿ ವಿದ್ಯಾರ್ಥಿಗಳು, ಯುವಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಪಾಲ್ಗೊಂಡರು.