ಡಿ.13-14: ವಕೀಲರ ಕ್ರಿಕೆಟ್, ಥ್ರೋಬಾಲ್ ಪಂದ್ಯಾಟ, ಮುಖ್ಯಮಂತ್ರಿಗಳಿಂದ ಪೋಸ್ಟರ್ ಬಿಡುಗಡೆ
Thursday, December 04, 2025
ಡಿಸೆಂಬರ್ 13 ಮತ್ತು 14ರಂದು ಮಂಗಳೂರು ವಕೀಲರ ಸಂಘದಿಂದ ನಡೆಯಲಿರುವ ಜಿಲ್ಲಾ ಮಟ್ಟದ ಕ್ರಿಕೆಟ್, ಥ್ರೋ ಬಾಲ್ ಪಂದ್ಯಾಟದ ಪೋಸ್ಟರ್ ನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದರು.
ಪಣಂಬೂರು ಎನ್.ಎಂ.ಪಿ.ಟಿ ಕ್ರೀಡಾಂಗಣದಲ್ಲಿ ನಡೆಯುವ ಜಿಲ್ಲಾ ಮಟ್ಟದ ವಕೀಲರ ಕ್ರಿಕೆಟ್ ಹಾಗೂ ಥ್ರೋ ಬಾಲ್ ಪಂದ್ಯಾಟದದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ವಕೀಲರ ಸಂಘಗಳು ಭಾಗವಹಿಸಲಿವೆ.
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಎಚ್ ವಿ, ಪ್ರಧಾನ ಸರಕಾರಿ ಅಭಿಯೋಜಕ ಎಂ ಪಿ ನರೋನ್ಹ, ಟಿ.ಎನ್ ಪೂಜಾರಿ, ಎಂ ಆರ್ ಬಲ್ಲಾಳ್, ಎಂ.ಯಶವಂತ ಮರೋಳಿ, ಮಂಗಳೂರು ವಕೀಲರ ಸಂಘ ದ ಉಪಾಧ್ಯಕ್ಷ ಸುಜಿತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಎಚ್, ಜೊತೆ ಕಾರ್ಯದರ್ಶಿ ಜ್ಯೋತಿ, ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಡಿಕೋಸ್ಟ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಉಪಸ್ಥಿತರಿದ್ದರು.